ಕಲಬುರಗಿ : ಅಂಬೇಡ್ಕರ್ ವಿರುದ್ಧ ಅಮಿತ್ ಶಾ ಹೇಳಿಕೆ ಖಂಡಿಸಿ ಚಿಂಚೋಳಿ ಬಂದ್
ಕಲಬುರಗಿ: ಕೇಂದ್ರ ಗೃಹ ಸಚಿವ అಮಿತ್ ಶಾ ಅವರು ಸದನದೊಳಗೆ ಬಹಿರಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಅಪಹಾಸ್ಯಗೊಳಿಸಿ ಅವಮಾನಿಸಿದ್ದು, ತಕ್ಷಣವೇ ಸಚಿವ ಸ್ಥಾನದಿಂದ ವಜಾಗೊಳಿಸಿ ಪಕ್ಷದಿಂದ ಉಚ್ಚಾಟಿಸುವಂತೆ ಒತ್ತಾಯಿಸಿ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಚಿಂಚೋಳಿ ಮತ್ತು ಚಂದಾಪುರ ಪಟ್ಟಣ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಯಿತು.
ಗೋಪಾಲ್ ರಾಂಪೂರೆ, ಶಾಮರಾವ್ ಕೊರವಿ, ಗೌತಮ್ ಬೊಮ್ಮನಳ್ಳಿ, ಮಾರುತಿ ಗಂಜಗಿರಿ, ಸಂತೋಷ್ ಗುತ್ತೇದಾರ್, ಕನ್ನಡ ಪರ ಸಂಘಟನೆಯ ಮುಖಂಡ ಸಚಿನ್ ರಾಠೋಡ್, ತಾಲ್ಲೂಕು ಬಂಜಾರಾ ಸಮಾಜದ ಅಧ್ಯಕ್ಷ ರಾಮಶೆಟ್ಟಿ ಪವಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ, ತಾಲ್ಲೂಕು ಕೋಲಿ ಸಮಾಜ ಅನೀಲಕುಮಾರ್ ಜಮಾದಾರ್, ಲಕ್ಷ್ಮಣ್ ಆವುಂಟಿ, ಮರಾಠಾ ಸಮಾಜದ ಅಧ್ಯಕ್ಷ ರವಿ ಪಾಟೀಲ್, ಹಿರಿಯ ನ್ಯಾಯವಾದಿ ಮಾಣಿಕರಾವ್ ಗುಲಗುಂಜಿ, ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್ ಬಾಸಿತ್, ರೈತ ಸಂಘದ ಮುಖಂಡ ಶರಣಬಸಪ್ಪ ಮಮ್ಮಶೆಟ್ಟಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಇದ್ದರು.
ಪ್ರತಿಭಟನೆಯಲ್ಲಿ ಸಚಿವ ಅಮಿತ್ ಶಾ ಅವರ ಅಣಕು ಶವಯಾತ್ರೆ ನಡೆಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.