ಕಲಬುರಗಿ| ಗಣೇಶ ವಿಸರ್ಜನೆ ವೇಳೆ ಟಿಪ್ಪು ವಿರುದ್ದ ಅಕ್ಷೇಪಾರ್ಹ ಘೋಷಣೆ: ಐವರ ವಿರುದ್ಧ ಪ್ರಕರಣ ದಾಖಲು

Update: 2024-09-25 17:37 GMT

ಕಲಬುರಗಿ: ಜೇವರ್ಗಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಟಿಪ್ಪು ಸುಲ್ತಾನ್ ಕುರಿತು ವಿವಾದಾತ್ಮಕ ಘೋಷಣೆ ಕೂಗಿದ ಐವರ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ ಆಧರಿಸಿ ಪಟ್ಟಣದ ನಿವಾಸಿಗಳಾದ ಸಚಿನ್ ಬಾಲದಂಡಪ್ಪ (24), ಭೀಮಾಶಂಕರ ಪ್ರಕಾಶ (24), ಶಿವಕುಮಾರ ದೇವಿಂದ್ರಪ್ಪ (26), ಸುನೀಲ ಮೌನೇಶ (26) ಹಾಗೂ ಸಿದ್ದು ಮಲ್ಲಿಕಾರ್ಜುನ (20) ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿಗಳಿಂದ ಮುಚ್ಚಳಿಕೆ ಪತ್ರ ಬರೆಸಿ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಟ್ಟಣದ ತಳವಾರ ಓಣಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸೆ.20ರಂದು ಜರುಗಿತ್ತು. ಮೆರವಣಿಗೆ ವೇಳೆ ಈ ಐವರು ಟಿಪ್ಪು ಸುಲ್ತಾನ್ ಬಗ್ಗೆ ಆಕ್ಷೇಪಾರ್ಹ ಘೋಷಣೆ ಕೂಗಿರುವ ವಿಡಿಯೋ ಹರಿದಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News