ಸಚಿವ ಪ್ರಿಯಾಂಕ್ ಖರ್ಗೆ ಗೆ ಜಾತಿ ನಿಂದನೆ, ಜೀವ ಬೆದರಿಕೆ ಪತ್ರ; ಪ್ರಕರಣ ದಾಖಲು
ಕಲಬುರಗಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅನಾಮಿಕ ಇಬ್ಬರು ಜಾತಿ ನಿಂದನೆ ಹಾಗೂ ಎನ್ ಕೌಂಟರ್ ಮಾಡುವುದಾಗಿ ಜೀವ ಬೆದರಿಕೆ ಪತ್ರ ಬಂದಿರುವ ಬಗ್ಗೆ ವರದಿಯಾಗಿದೆ.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಹೆಣ ಬಿಳಿಸಿಯಾದರೂ ಪರವಾಗಿಲ್ಲ ಈ ಚುನಾವಣೆ ಗೆಲ್ಲಬೇಕು ಅಂತ ಬಿಜೆಪಿಯವರು ಮುಂದಾಗಿದ್ದಾರೆ. ಕಲಬುರಗಿಯಲ್ಲಿ ನಿನ್ನ ಎನ್ ಕೌಂಟರ್ ಮಾಡಿ, ಹದ್ದುಗಳು ತಿನ್ನುವ ಹಾಗೆ ಮಾಡುತ್ತೇವೆ. ಇದನ್ನ ನೆನಪಿಟ್ಟುಕೊಂಡು ನಡೆ ಅಂತಾ ಇಬ್ಬರು ಬರೆದು ಸಹಿ ಮಾಡಿ ಪತ್ರ ಬರೆದು ಬೆದರಿಕೆ ಹಾಕಿದ್ದಾರೆ. ಗಲಭೆ ಸೃಷ್ಟಿ ಮಾಡಿ ಚುನಾವಣೆ ನಡೆಸಬೇಕು ಅಂತಾ ನಿರ್ಧಾರ ಮಾಡಿದ್ದಾರೆ ಎಂದರು
ಈ ಹಿಂದೆ ನನಗೆ ಚಿತ್ತಾಪುರ ಕ್ಷೇತ್ರದ ಬಿಜೆಪಿ ಮುಖಂಡ ರೌಡಿಶೀಟರ್ ಮಣಿಕಂಠ ರಾಠೋಡ್, ನನ್ನ ಕುಟುಂಬ ಮುಗಿಸುತ್ತೇವೆ ಅಂತ ಬೆದರಿಕೆ ಹಾಕಿದ್ದ. ಶೂಟ್ ಮಾಡೋಕೆ ರೆಡಿ ಇದ್ದೆನೆ ಅಂತ ಹೇಳಿದ್ದ. ಅದಾದ ಮೇಲೆ ಅವನು ಮನೆ ಸುತ್ತು ಹಾಕಿದ್ದ. ಅದರ ಬಗ್ಗೆ ಕೂಡ ನಾನು ವಿಡಿಯೋ ಕೊಟ್ಟಾಗ ಅವರು ಏನೂ ಕ್ರಮ ಕೈಗೊಂಡಿಲ್ಲ. ಖರ್ಗೆ ಕುಟುಂಬವನ್ನ ಸಾಫ್ ಮಾಡುತ್ತೇನೆ ಅಂತ ಹೇಳಿದ್ದ. ಇಷ್ಟೆಲ್ಲಾ ಆದರೂ ಅವನಿಗೆ ಬಿಜೆಪಿ ಸರಕಾರ ಏನು ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
15 ದಿನದ ಹಿಂದೆ ನನಗೆ ಒಂದು ಪತ್ರ ಬಂದಿದೆ. ಬಿಜೆಪಿಯ ಮನುವಾದಿಗಳು ನೇರವಾಗಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನಮ್ಮ ತಂದೆ ತಾಯಿ ನಮ್ಮ ಕುಟುಂಬದವರಿಗೆ ಹೊಲೆಯ ಮಾದೀಗ ಅಂತಾ ಉಲ್ಲೇಖ ಮಾಡಿ, ನೇರವಾಗಿ ಎನ್ ಕೌಂಟರ್ ಮಾಡ್ತೆನೆ ಅಂತಾ ಬೆದರಿಕೆ ಹಾಕಿ ನನ್ನ ಕಚೇರಿಗೆ ಪತ್ರ ಬರೆದಿದ್ದಾರೆ. ಚುನಾವಣೆ ಗೆಲ್ಲೋದಕ್ಕೆ ಇವರು ಪ್ರಿಯಾಂಕ್ ಖರ್ಗೆ ಹೆಣ ಬಿಳಿಸೋದಕ್ಕೆ ರೆಡಿಯಾಗಿದ್ದಾರೆ. ಆದರೆ ನಾವು ಯಾವುದಕ್ಕೂ ಹೆದರೋದಿಲ್ಲ ಕಾನೂನು ಪ್ರಕಾರ ಎದುರಿಸುತ್ತೇವೆ ಎಂದರು.
ಕಲಬುರಗಿಯಿಂದ ನನ್ನ ಕಚೇರಿಗೆ ಪತ್ರ ಬಂದಿದೆ. ಸಂಸದ ಡಾ. ಉಮೇಶ್ ಜಾಧವ್ ಪದೇ ಪದೇ ಫ್ರೀ ಆಂಡ್ ಫೇರ್ ಎಲೆಕ್ಷನ್ ಯಾಕೆ ಅಂತಿದ್ದಾರೆ ಅಂತಾ ಇವಾಗ ಗೊತ್ತಾಯ್ತು ಎಂದು ನೇರವಾಗಿ ಸಂಸದ ಜಾಧವ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.