ಚೆನ್ನಮ್ಮ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ: ಮರಗೋಳ

Update: 2024-10-21 13:19 GMT

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮಾ ಅವರ 200ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷೆ ಜ್ಯೋತಿ ಮರಗೋಳ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.23ರಂದು ಬೆಳಿಗ್ಗೆ 8.30ಗಂಟೆಗೆ ನಗರದ ಸರದಾರ ವಲ್ಲಭಾಯಿ ಪಟೇಲ್ ವೃತ್ತದಿಂದ ಹೊರಡಲಿರುವ ಭವ್ಯ ಮೆರವರಣಿಗೆಯನ್ನು ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ಉದ್ಘಾಟಿಸುವರು, ಡಾ. ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯ ಲಿರುವ ಕಾರ್ಯಕ್ರಮದಲ್ಲಿ ಡಾ. ನೀಲಾಂಬಿಕಾ ಶೇರಿಕಾರ ಅವರು ಉಪನ್ಯಾಸ ನೀಡುವರು ಎಂದರು.

ಕಾರ್ಯಕ್ರಮದಲ್ಲಿ ಜಾನವಿ ಶರಣಕುಮಾರ ಮೋದಿ, ಪ್ರೇಮಲತಾ ಅಲ್ಲಮಪ್ರಭು ಪಾಟೀಲ, ಶಾಂತಾಬಾಯಿ ಎಂ.ವೈ. ಪಾಟೀಲ್, ವಿಲಾಸವತಿ ಖೂಬಾ, ಲಕ್ಷ್ಮೀ ದತ್ತಾತ್ರೇಯ ಪಾಟೀಲ, ಪ್ರಿಯಾಂಕಾ ಚಂದ್ರಕಾಂತ ಪಾಟೀಲ ಡಾ. ಪ್ರತಿಮಾ ಕಾಮರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.

ನಂತರ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಿಯಾ ನೃತ್ಯಲಯಾ ಕಲಾ ಸಂಸ್ಥೆ ವತಿಯಿಂದ ಕಾರ್ಯಕ್ರಮ ನಡೆಯಲಿದ್ದು ನಂತರ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕವನ್ನು ಡಾ. ಪುಟ್ಟರಾಜ ಪಾಟೀಲ ನಿರ್ದೇಶನದಲ್ಲಿ ವಿಶ್ವರಂಗ ಕಲಬುರಗಿಯವರು ಪಸ್ತುತ ಪಡಿಸಲಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಶ್ರೀದೇವಿ ಸಾಸನಗೇರ, ವಿಜಯಲಕ್ಷ್ಮೀ ಪಾಟೀಲ್, ಮಾಲಾ ಕಣ್ಣಿ, ಶರಣಮ್ಮ ಹಿರೇಮಠ ಇದ್ದರು.

ರಾಜ್ಯದ ಇತಿಹಾಸದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ಜಯಂತಿಯನ್ನು ಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷತೆಯಲ್ಲಿ ಜಯಂತಿ ಆಚರಣೆ ನಡೆಯುತ್ತಿರುವುದು. ಸ್ವಾಗತಾರ್ಹ, ಜೊತೆಗೆ ಕಲಬುರಗಿ ನಗರದಲ್ಲಿ ಮಹಿಳಾ ಕುಲಕ್ಕೆ ಸ್ಫೂರ್ತಿಯಾಗಿರುವ ರಾಣಿ ಚೆನ್ನಮ್ಮಾಳ ಪ್ರತಿಮೆ ಸ್ಥಾಪನೆಗೆ ಸ್ಥಳಾವಕಾಶ ಜಿಲ್ಲಾಡಳಿ ಮತ್ತು ಪಾಲಿಕೆ ಕ್ರಮವಹಿಸಬೇಕು.

-ಮಾಲಾ ಕಣ್ಣಿ ಜಯಂತ್ಯೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News