ಕಲಬುರಗಿ ಜೈಲಿನಿಂದ ಹೊರಬಿತ್ತು ಮತ್ತೊಂದು ಪ್ರಕರಣ‌ | ಕಲ್ಲು ತೂರಾಟ ನಡೆಸಿದ 13 ಜನರ ವಿರುದ್ಧ ಎಫ್‌ಐಆರ್

Update: 2024-10-19 15:15 GMT

ಕಲಬುರಗಿ : ಕಲಬುರಗಿ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣದ ಬೆನ್ನಲ್ಲೇ ಕೈದಿಗಳ ಮಧ್ಯೆ ಜಗಳವಾಗಿ ಕಲ್ಲು ತೂರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಜೈಲಿನ ಮುಖ್ಯ ವಾರ್ಡ್‌ನ್‌ಗೆ ಗಾಯವಾಗಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ಕಳೆದ ಅ.9ರಂದು ಇಲ್ಲಿ ನಡೆದ ಘಟನೆಯ ಕುರಿತು ಕ್ರಮ ಕೈಗೊಳ್ಳುವಂತೆ ಜೈಲಿನ ಎಸ್ಪಿ ಡಾ.ಅನೀತಾ ಅವರು ವಾರ್ಡ್‌ನ್ ನಾಗಪ್ಪ ಮಡನಳ್ಳಿ ಅವರ ಮೂಲಕ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಕುರಿತು ಅ.17ರಂದು 13 ಜನ ಕೈದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಜಾ ಕೈದಿಗಳಾದ ಸಾಗರ ಬ್ಯಾಡರ್, ಅರ್ಜುನ, ನಾಗರಾಜ, ಮಹಾಂತೇಶ, ಯಶವಂತಪ್ಪ, ಸುನೀಲ ಕಾಂಬ್ಳೆ, ಲತೀಫ್, ವಿಚಾರಣಾಧೀನ ಕೈದಿಗಳಾದ ಜಮೀರ್ ಅಲಿಯಾಸ್ ಬಚ್ಚನ್, ಜುಲೈಕರ್, ಮುಹಮ್ಮದ್ ಹನೀಫ್, ಶೇಖ್ ಸದ್ದಾಂ, ಜಾಕೀರ್, ಅಬ್ದುಲ್ ಖಾದರ್ ಜಿಲಾನಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಮೀಪದ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News