ಕಲಬುರಗಿ ಜಿಲ್ಲಾ ಕಸಾಪದಿಂದ ಕಲಾಸೌಧ ಸ್ಥಾಪನೆ : ಪರಿಷತ್ತಿನ ಕಾರ್ಯಕ್ಕೆ ಕಲಾವಿದರ ಮೆಚ್ಚುಗೆ

Update: 2024-10-22 14:00 GMT

ಕಲಬುರಗಿ: ʼಸಾಹಿತ್ಯ, ಸಂಸ್ಕೃತಿಯ ಜತೆಗೆ ಜಿಲ್ಲೆಯ ಚಿತ್ರಕಲಾ ಪ್ರತಿಭೆಗಳಿಗೂ ಸಂಪೂರ್ಣ ಸಹಕಾರ ಜಿಲ್ಲಾಡಳಿತದಿಂದ ನೀಡಲಾಗುವುದುʼ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಭರವಸೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಗರದ ಕನ್ನಡ ಭವನದಲ್ಲಿನ ಬಾಪೂಗೌಡ ದರ್ಶನಾಪೂರ ರಂಗಮಂದಿರದ ಎಡಭಾಗದಲ್ಲಿ ಹೊಸದಾಗಿ ಸ್ಥಾಪಿಸಲ್ಪಟ್ಟ ಕಲಾಸೌಧವನ್ನು ಉದ್ಘಾಟಿಸಿ ಮತ್ತು ದಶವರ್ಣ ಕಲಾವಿದರಿಂದ ನಡೆದ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ʼಜಿಲ್ಲೆಯಲ್ಲಿ ನೂರಾರು ಚಿತ್ರಕಲಾ ಪ್ರತಿಭೆಗಳು ಸೇವೆ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸಹಾಯ ಸಹಕಾರ ಇಲ್ಲದಂತಾಗಿದೆ. ಇಂದು ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಚಿತ್ರಕಲಾವಿದರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಲಾಸೌಧ ಸ್ಥಾಪಿಸುವ ಮೂಲಕ ಪ್ರೋತ್ಸಾಹ ನೀಡುತ್ತಿದೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ʼಚಿತ್ರಕಲಾವಿದರ ಕಲಾ ಕುಂಚದಲ್ಲಿ ಅರಳಿದ ಪ್ರತಿಭೆಗಳು ಜಿಲ್ಲೆಯಲ್ಲಿ ಎಲೆ ಮರೆಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅಂಥ ಕೆಲ ಪ್ರತಿಭೆಗಳ ಚಿತ್ರಕಲಾ ಅನಾವರಣಗೊಂಡಿದ್ದು, ನಮಗಂತೂ ತುಂಬಾ ಖುಷಿ ನೀಡಿದೆʼ ಎಂದರು.

ನಗರ ಪೊಲೀಸ್ ಆಯುಕ್ತರಾದ ಡಾ ಶರಣಪ್ಪ ಎಸ್.ಡಿ, ನಾಡೋಜ ಡಾ.ಜೆ.ಎಸ್.ಖಂಡೇರಾವ, ಡಾ.ಎ.ಎಸ್.ಪಾಟೀಲ, ಡಾ.ರೆಹಮಾನ್ ಪಟೇಲ್, ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ರವೀಂದ್ರ ಭಂಟನಳ್ಳಿ, ಧರ್ಮರಾಜ ಜವಳಿ, ಬಾಬುರಾವ ಪಾಟೀಲ ಇತರರಿದ್ದರು.

ದಶವರ್ಣ ಕಲಾವಿದರಾದ ಬಸವರಾಜ ಉಪ್ಪಿನ, ಡಾ.ಸುಬ್ಬಯ್ಯ ನೀಲಾ, ರಾಜಶೇಖರ ಶ್ಯಾಮಣ್ಣ, ಮುಹಮ್ಮದ್ ಅಯಾಜೋದ್ದಿನ್ ಪಟೇಲ್, ರಾಜೇಶ ಸಾಂಗ್ವಿಕರ್, ಡಾ.ರೆಹಮಾನ್ ಪಟೇಲ್, ಡಾ.ಶಾಹೇದ ಪಾಷಾ, ರಾಘವೇಂದ್ರ ಬುರ್ಲಿ, ಶಿವಲೀಲಾ ಉಪ್ಪಿನ, ನಾಗರಾಜ ಕುಂಬಾರ ಅವರ ಕಲಾ ಕುಂಚದಲ್ಲಿ ಅರಳಿದ ವಿವಿಧ ಬಗೆಯ ಚಿತ್ರಕಲೆಗಳು ವೀಕ್ಷಕರ ವಿಶೇಷ ಗಮನ ಸೆಳೆಯಿತು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News