ಕಲಬುರಗಿ | ಲೋಕಾಯುಕ್ತ ದಾಳಿ : ಬಿಬಿಎಂಪಿ ಸಹಾಯಕ ಆಯುಕ್ತರ ಮನೆಯಲ್ಲಿ ಕ್ಯಾಸಿನೋ ಕಾಯಿನ್, ಹುಲಿ ಉಗುರು ಪತ್ತೆ

Update: 2024-07-11 12:13 GMT

ಕಲಬುರಗಿ : ಬಿಬಿಎಂಪಿಯ ಸಹಾಯಕ ಆಯುಕ್ತ ಬಸವರಾಜ ಮಗ್ಗಿ ಎಂಬವರ ಕಲಬುರಗಿ ನಗರದ ಮನೆಯಲ್ಲಿ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಸುಮಾರು 12.50 ಲಕ್ಷ ರೂ. ಮೌಲ್ಯದ ಕ್ಯಾಸಿನೊ ಕಾಯಿನ್‌ಗಳು ಪತ್ತೆಯಾದ್ದವು. ಇದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರಿಗೆ ಕ್ಯಾಸಿನೊ ಕಾಯಿನ್‌ಗಳ ಮತ್ತೊಂದು ಸೂಟ್ ಕೇಸ್ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಬಿಬಿಎಂಪಿಯ ಸಹಾಯಕ ಆಯುಕ್ತ ಬಸವರಾಜ ಎಂಬವರ ಮನೆಯಲ್ಲಿ ಲೋಕಾಯುಕ್ತ ಎಸ್‌.ಪಿ ಜಾನ್ ಆಂಟೋನಿ ನೇತೃತ್ವದ ಅಧಿಕಾರಿಗಳ ತಂಡ ಬೆಳಿಗ್ಗೆಯಿಂದ ಕಡತಗಳ ಪರಿಶೀಲನೆ, ಮನೆಯ ತಪಾಸಣೆ ಮಾಡುತ್ತಿದೆ.

ಈ ವೇಳೆ ಬೆಳಿಗ್ಗೆ ಸುಮಾರು 12.50 ಲಕ್ಷ ರೂ. ಮೌಲ್ಯದ ಕ್ಯಾಸಿನೊ ಕಾಯಿನ್‌ಗಳು ಪತ್ತೆಯಾಗಿದ್ದವು. ಈಗ ಸೂಟ್‌ ಕೇಸ್‌ನಲ್ಲಿ 50 ಸಾವಿರದಿಂದ 1 ಲಕ್ಷ ರೂ. ಮೌಲ್ಯದ ಕ್ಯಾಸಿನೊ ಕಾಯಿನ್‌ಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.

ಅಲ್ಲದೆ, ದಾಖಲೆಗಳ ತಪಾಸಣೆಯ ವೇಳೆ ಎರಡು ಹುಲಿ ಉಗುರು ಸಹ ಸಿಕ್ಕಿವೆ ಎನ್ನಲಾಗಿದೆ. ಹುಲಿ ಉಗುರಿನ ಸತ್ಯಾಸತ್ಯತೆ ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿ.ಎಸ್‌.ಪಿ ಮಂಜುನಾಥ್, ಇನ್ಸ್‌ಪ ಕ್ಟರ್ ಹನುಮಂತ್ ಸನ್ಮನಿ, ಪೊಲೀಸ್ ಸಿಬ್ಬಂದಿಗಳು ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News