ಕಲಬುರಗಿ | ಕಲುಷಿತ ನೀರು ಕುಡಿದು 80 ಮಂದಿ ಅಸ್ವಸ್ಥ
Update: 2024-09-30 09:53 GMT
ಕಲಬುರಗಿ: ಗ್ರಾಮಕ್ಕೆ ನೀರು ಸರಬರಾಜು ಆಗುವ ಟ್ಯಾಂಕ್‌ನ ಕಲುಷಿತ ನೀರು ಕುಡಿದು 80 ಮಂದಿ ಅಸ್ವಸ್ಥರಾಗಿರುವ ಘಟನೆ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದ ಭೋವಿ ಸಮಜಾದ ಬಡಾವಣೆಯಲ್ಲಿ ನಡೆದಿದೆ.
ಅಶುದ್ಧ ನೀರು ಕುಡಿದಿರುವುದರಿಂದ 80 ಮಂದಿಗೆ ವಾಂತಿ, ಭೇದಿ, ತಲೆ ಸುತ್ತು ಕಾಣಿಸಿಕೊಂಡಿದ್ದು, ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ. ಅಸ್ವಸ್ಥರಿಗೆ ಗ್ರಾಮದ ಸಮುದಾಯ ಭವನದಲ್ಲಿ ಚಿಕಿತ್ಸೆ ನೀಡಿಲಾಗಿದೆ. ರವಿವಾರ 40 ಜನರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ಆದರೆ, ಮತ್ತೆ ಸೋಮವಾರ 40 ಜನರ ಚಿಕಿತ್ಸೆ ನೀಡಲಾಗಿದೆ ಎಂದು ಸ್ಥಳೀಯ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಸುಮಾರು ತಿಂಗಳಿಂದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ವಹಿಸಿರುವುದರಿಂದ ಇಂತಹ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.