ಕಲಬುರಗಿ | ವಿವಿಧ ಯೋಜನೆಗಳ ಅಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

Update: 2024-10-30 07:30 GMT

ಕಲಬುರಗಿ : ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡಿರುವ ಶೇ.7.25 ಮತ್ತು ಶೇ.5ರ ಕ್ರಿಯಾ ಯೋಜನೆಗಳಡಿ ನಿಗದಿಪಡಿಸಿದ ಅಲ್ಪಸಂಖ್ಯಾತರು, ಹಿಂದುಳಿದ ಬಡಜನರಿಗೆ ಹಾಗೂ ವಿಕಲಚೇತನರ ಕಲ್ಯಾಣ ಕಾರ್ಯಕ್ರಮ, ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಶೇ.7.25 ರ 2023-24 ಸಾಲಿನ (ಎಸ್.ಎಫ್.ಸಿ) ಇತರೆ ಬಡಜನರ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವೈಯಕ್ತಿಕ ಕಲ್ಯಾಣ ಕಾರ್ಯಕ್ರಮಗಳಡಿ 2023-24ನೇ ಸಾಲಿಗೆ ಕೊಳಚೆ ನಿರ್ಮೂಲನಾ ಮಂಡಳಿಯ ಫಲಾನುಭವಿಗಳಿಗೆ ವಂತಿಕೆ ಅನುದಾನ ಭರಿಸಲು ಸಹಾಯಧನ ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗದವರಾಗಿರಬೇಕು. ಕಲಬುರಗಿ ನಗರದ ನಿವಾಸಿಯಾಗಿರಬೇಕು.

ಶೇ.5ರ 2023-24ನೇ ಸಾಲಿನ ವಿಕಲಚೇತನರಿಗೆ ವೈಯಕ್ತಿಕ ಕಲ್ಯಾಣ ಕಾರ್ಯಕ್ರಮಗಳಡಿ 2023-24ನೇ ಸಾಲಿನ ಕಲಬುರಗಿ ವಿಕಲಚೇತನರಿಗೆ (ಅಂಗವಿಲಕರು) ಕಂಪ್ಯೂಟರ ತರಬೇತಿ ನೀಡಲಾಗುತಿದ್ದು, ಅರ್ಹ ಫಲಾನುಭವಿಗಳು ವಿಕಲಚೇತನರಾಗಿರಬೇಕು. ಕಲಬುರಗಿ ನಗರದ ನಿವಾಸಿಯಾಗಿರಬೇಕು.

ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಮಹಾನಗರಪಾಲಿಕೆಯ ಆವಕ ಶಾಖೆಯಿಂದ ಕಚೇರಿ ವೇಳೆಯಲ್ಲಿ 2024ರ ನವೆಂಬರ್ 1 ರಿಂದ ಡಿಸೆಂಬರ್ 1 ರ ಸಂಜೆ 5.30 ಗಂಟೆಯೊಳಗಾಗಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ದೃಢೀಕರಣಗಳೊಂದಿಗೆ 2024ರ ಡಿಸೆಂಬರ್ 1ರಿಂದ ಡಿಸೆಂಬರ್ 9ರ ಸಂಜೆ 4.30 ಗಂಟೆಯೊಳಗಾಗಿ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಹತೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಶೇ7.25 ಮತ್ತು ಶೇ.5 ಶಾಖೆಯನ್ನು ಹಾಗೂ http://www.kalaburagicity.mrc.gov ವೆಬ್‌ಸೈಟ್‌ನ್ನು ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News