ಕರ್ನಾಟಕ ರಾಜೋತ್ಸವ ದಿನಾಚರಣೆ | ಸ್ಥಳ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್
ಕಲಬುರಗಿ: ಗಂಜ್ ನಗರದ ನಗರೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಸ್ಥಳ ವೀಕ್ಷಣೆ ಮಾಡಿದರು.
ಕನ್ನಡ ರಾಜ್ಯೋತ್ಸವನ್ನು ಅಚ್ಚುಕಟ್ಟಾಗಿ ನಡೆಸಬೇಕಿದ್ದು ಕಾರ್ಯಕ್ರಮ ನಡೆಯುವ ಕಡೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವೇದಿಕೆ, ಶ್ಯಾಮಿಯಾನದ ಬಗ್ಗೆ ಹೆಚ್ಚು ಗಮನಹರಿಸಬೇಕು. ಗಣ್ಯ ವ್ಯಕ್ತಿಗಳಿಗೆ ಹಾಸನದ ವ್ಯವಸ್ಥೆ, ವಿದ್ಯಾರ್ಥಿಗಳು ಕುಳಿತು ಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅವರಿಗೆ ಎಷ್ಟು ಕಲಾ ತಂಡಗಳು ಭಾಗವಹಿಸಲಿವೆ ಎಂದಾಗ ನಾಲ್ಕು ಸಂಸ್ಕೃತಿ ಕಲಾ ತಂಡಗಳು ಎಂದು ಅವರಿಗೆ ತಿಳಿಸಿದರು.
ಟ್ರಾಫಿಕ್ ವ್ಯವಸ್ಥೆ ಹೇಗೆ ನಿಯಂತ್ರಣ ಮಾಡಬಹುದು, ಶಾಲಾ ಕಾಲೇಜಿನ ಮಕ್ಕಳು ಹಾಗೂ ಶಿಕ್ಷಕರು ಬರುವಾಗ ವಾಹನಗಳನ್ನು ನಿಯಂತ್ರಿಸಲು ಪೂರ್ವ ಸಿದ್ಥತೆಗಳನ್ನು ಮಾಡಿಕೊಳ್ಳಲು ಡಿಸಿಪಿ ಕನಿಕಾ ಸಿಕ್ರಿವಾಲ್ ಅವರಿಗೆ ನಿರ್ದೇಶನ ನೀಡಿದರು.
ಸಂಬಂಧ ಪಟ್ಟ ಅಧಿಕಾರಿಗಳಿಗೆ ವಹಿಸಿದ ಕಾರ್ಯಕಲಾಪಗಳನ್ನು ಅಚ್ಚುಕಟ್ಟಾಗಿ ಮಾಡಲು ತಿಳಿಸಿದರು. ಏಳು ಟ್ಯಾಬ್ಲೋಗಳು ಸಾರ್ವಜನಿಕ ಪ್ರಸಾರಗಳು, ಕನ್ನಡ ತಾಯಿಯ ಪ್ರತಿಮೆಯನ್ನು ರಥದಲ್ಲಿ ಮೆರವಣಿಗೆ ಮೂಲಕ ವಿವಿಧತೆಯಲ್ಲಿ ಏಕತೆ ಸಾರುವ ಕನ್ನಡಾಂಬೆ ಮಾತೆಯನ್ನು ವಿಜೃಂಭಣೆಯಂದ ಮಾಡುವುದರ ಬಗ್ಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ,ಯೋಜನಾ ನಿರ್ದೇಶಕ ಜಗದೇವಪ್ಪ ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕ ಭೀಮರಾಯ, ಮಹಾನಗರ ಪಾಲಿಕೆ ಉಪ ಅಯುಕ್ತ ಆರ್.ಪಿ.ಜಾಧವ, ಗ್ರೇಡ್-1 ತಹಶೀಲ್ದಾರ ಕೆ.ಆನಂದ ಶೀಲ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಶಿಷ್ಠಾಚಾರದ ತಹಶೀಲ್ದಾರ ಜಗದೀಶ ಚೌರ, ನಗರ ಸಭೆ ಕಾರ್ಯಾನಿರ್ವಾಹಕ ಅಭಿಯಂತರರು ಪುರೋಷೋತ್ತಮ ಹಾಗೂ ಜೇವರ್ಗಿ ಪ್ರಾಂಶುಪಾಲ ಬಸವರಾಜ ಬಿರಾದರ, ಸತ್ಯಂ ಕಾಲೇಜಿನ ಪ್ರಾಂಶುಪಾಲರಾದ ಬಿ.ಎಚ್. ನಿರಗುಡಿ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದರು.