ಕಲಬುರಗಿ | ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ತಂದೆಯಿಂದ ಬ್ಯಾನರ್ ಚಳವಳಿ!

Update: 2024-10-18 09:30 GMT

ಕಲಬುರಗಿ : ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ತಂದೆಯೋರ್ವರು ಏಕಾಂಗಿಯಾಗಿ ಹೋರಾಟ‌ಕ್ಕಿಳಿದಿದ್ದು, ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಬ್ಯಾನರ್ ಅಳವಡಿಸಿ ವಿನೂತನ ಹೋರಾಟ ನಡೆಸುತ್ತಿದ್ದಾರೆ.

ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಚನ್ನಪ್ಪಗೌಡ ಎಂಬವರು ನಗರದ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಅಳಿಯ ಮತ್ತು ಆತನ ಕುಟುಂಬದವರ ಪತ್ತೆಗಾಗಿ ಬ್ಯಾನರ್ ಅಳವಡಿಸಿದ್ದಾರೆ.

ಕಳೆದ ಐದು ವರ್ಷದ ಹಿಂದೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಶಂಕರಪಲ್ಲಿ ಗ್ರಾಮದ ಶಂಕರರೆಡ್ಡಿ ಎಂಬವರ ಜೊತೆ ಮಗಳು ವಿಜಯಲಕ್ಷ್ಮಿಯನ್ನು ಮದುವೆ ಮಾಡಿಕೊಟ್ಟಿದ್ದ ತಂದೆ ಚನ್ನಪ್ಪಗೌಡ, ಕಳೆದ ಒಂದು ವರ್ಷದ ಹಿಂದೆ ಮಗಳ ಸಾವನ್ನಪ್ಪಿರುವುದಕ್ಕೆ ವರದಕ್ಷಿಣೆ ಕಿರುಕುಳ ಕಾರಣ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಮಗಳ ಸಾವಿನ ಬಗ್ಗೆ ದೂರು ನೀಡದಂತೆ‌ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಗಿದೆ. ಮಗಳನ್ನು ಕಳೆದುಕೊಂಡ ತಂದೆಯ ಬಳಿಗೆ ಮೊಮ್ಮಗಳನ್ನು ಕಳಿಸಿಕೊಡುವುದಾಗಿ ಹೇಳಿದ್ದ ಅಳಿಯ, ಜೊತೆಗೆ ಹತ್ತು ಎಕರೆ ಜಮೀನು  ನೀಡುವುದಾಗಿ ಪತ್ರ ಬರೆದುಕೊಟ್ಟಿದ್ದರು ಎನ್ನಲಾಗಿದೆ. ಇದೀಗ ಶಂಕರರೆಡ್ಡಿ ಮತ್ತು ಕುಟುಂಬ ಮೊಮ್ಮಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ನಾಪತ್ತೆಯಾಗಿರುವ ಅಳಿಯ ಮತ್ತು ಆತನ ಕಟುಂಬದ ಪತ್ತೆಗೆ ಬ್ಯಾನರ್ ಚಳವಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News