ಕಲಬುರಗಿ | ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಪಕ್ಷ ಸಂಸ್ಥಾಪನಾ ದಿನಾಚರಣೆ

ಕಲಬುರಗಿ: ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ರವಿವಾರ ಕಲಬುರಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಧ್ವಜಾರೋಹಣ ಮಾಡುವ ಮೂಲಕ ಪಕ್ಷದ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಪಕ್ಷದ ಹಿರಿಯ ನಾಯಕ, ಎಂಎಲ್ಸಿ ಆಗಿರುವ ಶಶಿಲ್ ಜಿ.ನಮೋಶಿ ಮತ್ತು ಮಾಜಿ ಎಂಎಲ್ಸಿ ಅಮರನಾಥ್ ಪಾಟೀಲ್ ಅವರು ಬಿಜೆಪಿ ಸಂಸ್ಥಾಪಕರ ಕೊಡುಗೆ ಮತ್ತು ಪಕ್ಷದ ಸಂಘಟನೆಯನ್ನು ಬಲಪಡಿಸಲು ಅವರ ಸಮರ್ಪಣೆಯ ಬಗ್ಗೆ ಮಾತನಾಡಿದರು.
ಕಲಬುರಗಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಅಶೋಕ್ ಬಗಲಿ, ಸಮಾಜದ ಸುಧಾರಣೆಗಾಗಿ ಬಿಜೆಪಿ ಕಾರ್ಯಕರ್ತರ ಶ್ರಮದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಉಮೇಶ್ ಪಾಟೀಲ್, ಶಿವಯೋಗಿ ನಾಗನಹಳ್ಳಿ, ಮಾದೇವ ಬೆಳಮಗಿ, ಲಿಂಗರಾಜ್ ಬಿರಾದಾರ್, ಬಸವರಾಜ್ ಪಾಟೀಲ್ ಕಮಲಾಪುರ್, ಧರ್ಮಣ್ಣ ಎಟಗಾ, ಸಂತೋಷ ಹಾದಿಮನಿ, ಭಾಗೀರಥಿ ಗುನ್ನಂಪುರ, ವೀರು ಪಾಟೀಲ್ ರಾಯ್ ಕೋಡ್, ಶ್ರೀನಿವಾಸ್ ದೇಸಾಯಿ, ಆನಂದ್ ಪಾಟೀಲ್, ಸಿದ್ದಾಜಿ ಪಾಟೀಲ್, ಬಸವರಾಜ್ ಬೆನ್ನೂರ್ಕರ್, ರೇವಣಸಿದ್ದಪ್ಪ ಸಂಕಾಲಿ, ಗೌರಿ ಚಿಕೋಟಿ, ಹರ್ಷವರ್ಧನ್ ಗುಗಳೆ, ಮಹೇಂದ್ರ ಪೂಜಾರಿ, ಮಹೇಶ್ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.