ಕಲಬುರಗಿ | ಸಿಮೆಂಟ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ : ಬೆಂಕಿ ನಂದಿಸಲು ಹರಸಾಹಸ

ಕಲಬುರಗಿ: ಸೇಡಂ ಪಟ್ಟಣದಲ್ಲಿಂದ ಹೈದರಾಬಾದ್ ತೆರಳುವ ಮುಖ್ಯ ರಸ್ತೆಯಲ್ಲಿರುವ ಅಲ್ಟ್ರಾಟೆಕ್ (ವಾಸವದತ್ತಾ) ಸಿಮೆಂಟ್ ಕಾರ್ಖಾನೆಯಲ್ಲಿ ದೊಡ್ಡ ಪ್ರಮಾಣದ ಜಮಿನೀನಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಅತ್ಯಧಿಕ ಪ್ರಮಾಣದಲ್ಲಿ ಸಂಗ್ರಹಿ ಇಟ್ಟಿದ ಕಸಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿಗಳು ಹರಸಾಹಸ ಪಟ್ಟಿರುವ ಘಟನೆ ನಡೆದಿದೆ.
ಶನಿವಾರ ರಾತ್ರಿ 7ಗಂಟೆಗೆ ಅಲ್ಟ್ರಾಟೆಕ್ (ವಾಸವದತ್ತಾ) ಸಿಮೆಂಟ್ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿದ್ದು, ಕೂಡಲೇ ಕಂಪನಿಯ ಅಗ್ನಿ ಶಾಮಕ ದಳದ 2 ವಾಹನ ಮತ್ತು ಮಳಖೇಡ ಅಲ್ಟ್ರಾಟೇಕ್ ಸಿಮೆಂಟ್ ಕಾರ್ಖಾನೆಯ 1 ವಾಹನ ಹಾಗೂ ಅಗ್ನಿ ಶಾಮಕ ದಳದ 1 ವಾಹನ ಬೆಂಕಿ ನಂದಿಸಲು ತೆರಳಿದ್ದಾಗ ಎಲ್ಲಾ ಕಡೆ ಬೆಂಕಿ ವಿಸ್ತರಣೆಗೊಂಡಿತು. ಅಗ್ನಿ ಶಾಮಕ ದಳದ 4 ವಾಹನಗಳು ಹಾಗೂ ಕಾರ್ಖಾನೆ ಸಿಬ್ಬಂದಿಗಳು ಸೇರಿ ಶನಿವಾರ ರಾತ್ರಿ 7 ಗಂಟೆಯಿಂದ ಬೆಂಕಿ ನಂದಿಸಲು ಎಷ್ಟೇ ಪ್ರಯತ್ನ ಪಟ್ಟರೂ ಇಲ್ಲಿಯವರೆಗೆ ಸಂಪೂರ್ಣ ಬೆಂಕಿ ನಂದಿಸಲು ಆಗಲಿಲ್ಲ, ಪವರ್ ಪ್ಲಾಟ್ ನಿಂದ ನೀರಿನ ಪೈಪ್ ಲೈನ್ ಮೂಲಕ ನೀರನ್ನು ಬಳಸಿ ಸಂಪೂರ್ಣ ಬೆಂಕಿ ನಂದಿಸಲು ಆಗಲಿಲ್ಲ ಎಂದು ತಿಳಿದುಬಂದಿದೆ.
ಶನಿವಾರ ಬೃಹತ್ ಗಾತ್ರದಲ್ಲಿ ಬೆಂಕಿಯನ್ನು ನೋಡಿ ಸೇಡಂ ಜನರು ಆತಂಕದಲ್ಲಿದ್ದಾರೆ.
ಸಹಾಯಕ ಅಗ್ನಿ ಶಾಮಕ ದಳದ ಅಧಿಕಾರಿ ಬಸಪ್ಪ, ಶರಣಯ್ಯ ಗುತ್ತಿಗೆದಾರ, ಮಸ್ತಾನ ಅಲಿ, ಡಿಎ ವಾಜಿದ್, ಮಹೇಬೂಬ್, ದೀನೇಶ ರೆಡ್ಡಿ, ಕಿರಣ್, ಸುನೀಲ್, ಶಿವಕುಮಾರ್, ಸದಾನಂದ, ಮೌನೇಶ್, ಮಲ್ಲಿಕಾರ್ಜುನ, ಸಾಬಣ್ಣ ಹಾಗೂ ಸಿಮೆಂಟ್ ಕಾರ್ಖಾನೆಯ ಅಗ್ನಿ ಶಾಮಕದ ಓಂಕಾರ ಸೇರಿದಂತೆ ಹಲವಾರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಕಾರ್ಖಾನೆ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ.