ಕಲಬುರಗಿ | ಹಳಿ ತಪ್ಪಿದ ಗೂಡ್ಸ್ ರೈಲು : ಅಧಿಕಾರಿಗಳಿಂದ ಪರಿಶೀಲನೆ

Update: 2024-10-06 09:59 GMT

ಹಳಿ ತಪ್ಪಿದ ಗೂಡ್ಸ್‌ ರೈಲು

ಕಲಬುರಗಿ : ಇಲ್ಲಿನ ವಾಡಿ ಜಂಕ್ಷನ್‌ನಿಂದ ರಾಯಚೂರು ಕಡೆಗೆ ಹೊರಟಿದ್ದ ಆಯಿಲ್ ಟ್ಯಾಂಕರ್ ಗೂಡ್ಸ್ ರೈಲು ಹಳಿಯಿಂದ ಜಾರಿರುವ ಘಟನೆ ರವಿವಾರ ನಡೆದಿದೆ.

ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿಯಿಂದ ಕೆಳಗೆ ಜಾರಿದೆ ಎಂದು ತಿಳಿದು ಬಂದಿದೆ. ರೈಲ್ವೇ ಇಲಾಖೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿದೆ ಎಂದು ಹೇಳಲಾಗುತ್ತಿದೆ. ಖಾಲಿ ಆಯಿಲ್‌ ಟ್ಯಾಂಕರ್‌ ಆಗಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ.

ಘಟನಾ ಸ್ಥಳಕ್ಕೆ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News