ಕಲಬುರಗಿ | ಮಹಿಳೆಯರಿಗೆ ಕಾನೂನಾತ್ಮಕ ಹಕ್ಕು ನೀಡಿದ್ದು ಡಾ.ಅಂಬೇಡ್ಕರ್ : ಡಾ.ಜಯದೇವಿ ಗಾಯಕವಾಡ

Update: 2025-04-06 19:11 IST
Photo of Program
  • whatsapp icon

ಕಲಬುರಗಿ : ಮಹಿಳೆಯರ ಸಾಮಾಜಿಕ ಚಿಂತನೆಯನ್ನು ಬುದ್ಧ,ಬಸವ ಮೊದಲಾದವರು ಪ್ರಯತ್ನಿಸಿದರು. ಇವರೆಲ್ಲರ ಚಿಂತನೆಗಳ ಜೊತೆಗೆ ತಮ್ಮ ವಿಚಾರಧಾರೆಯನ್ನು ಕಾನೂನು ಬದ್ದಗೊಳಿಸಿ ಸಂವಿಧಾನದ ಮೂಲಕ ಕೊಟ್ಟದ್ದು ಡಾ.ಬಿ.ಆರ್.ಅಂಬೇಡ್ಕರ್. ಅವರ ಋಣ ಎಲ್ಲಾ ವರ್ಗದ ಮಹಿಳೆಯರು ತೀರಿಸಬೇಕೆಂದು ಮಹಿಳಾ ಚಿಂತಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಅವರು ನುಡಿದರು.

ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ, ಹಳಕಟ್ಟಿ ರಾಷ್ಟ್ರೀಯ ಬಳಗ, ಜನಕಲ್ಯಾಣ ಟ್ರಸ್ಟ್, ಯುಥ್ವಾಡ್ವೆಂಚರ್ ಸ್ಪೊರ್ಟ್‌ ಅಸೋಸಿಯೇಷನ್ ಅಶ್ರಯದಲ್ಲಿ ಸುವರ್ಣ ಸಭಾಭವನದಲ್ಲಿ ಹಮ್ಮಿಕೊಂಡ ಡಾ.ಸಂಧ್ಯಾ ಎಸ್.ಕಾನೇಕರ್ ಅವರ 47ನೆಯ ಹುಟ್ಟು ಹಬ್ಬದ ಪ್ರಯುಕ್ತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದು ಡಾ.ಸಂಧ್ಯಾ ಕಾನೇಕರ ಅವರ ಆದರ್ಶ ದಾಂಪತ್ಯ, ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಕೊಡುಗೆ ಅಪಾರವೆಂದರು.

ಡಾ.ರುದ್ರವಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ತೆಗಲತಿಪ್ಪಿ, ಸವಿತಾ ಹುನಗುಂಟಿಮಠ, ರಾಜಶೇಖರ ಬಿರಾದಾರ, ಸುರೇಶ ಕಸನೇಕರ, ಕಾವೇರಿ ಬೆಳಮಗಿ, ಆಕಾಶ ತೆಗನೂರು, ದೇವರಾಜ ಕನ್ನಡಗಿ, ಸಿದ್ದಾರ್ಥ ಚಿಮ್ಮಿಇದಲಾಯಿ ಇದ್ದರು.

ಪ್ರಶಸ್ತಿ ಪ್ರದಾನ ಮಾಡಿದ ವೈದ್ಯಾಧಿಕಾರಿಗಳ ಜಿಲ್ಲಾ ಅಧ್ಯಕ್ಷರಾದ ಡಾ.ಶರಣಬಸಪ್ಪ ಗಣಜಲಖೇಡ ಮಾತನಾಡಿ, ಪ್ರಶಸ್ತಿಗಳು ಅವರ ಸಾಧನೆಗೆ ಹಿಡಿದ ಕನ್ನಡಿ. ಮುಂದೆ ಸೇವೆಗೆ ಸ್ಫೂರ್ತಿ ನೀಡುವುದೆಂದರು.

ಹಿರಿಯ ಸಾಹಿತಿ ಮತ್ತು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿದರು.

ಮಹಿಳಾ ಚೇತನ ಪ್ರಶಸ್ತಿ ಪುರಸ್ಕೃತರು :

ಪ್ರಮೋದಿನಿ ಕತಲಪ್ಪ ಚೂರಿ, ರೇಣುಕಾ ಪ್ರಕಾಶ, ನಜಮಾ ಬಾನು, ಸುಜಾತ ಮಲ್ಲಿಕಾರ್ಜುನ, ಭಾಗ್ಯಶ್ರೀ ಅನಿಲ ಕುಮಾರ, ಲಾಡು ಭೀಮು, ಜೈ ಶೀಲಾ ನಾಗರಾಜ, ಸುವರ್ಣ ದೇವಿಂದ್ರ, ಲಕ್ಷ್ಮೀ ಆನಂದ, ಮೈನಾಬಾಯಿ ಲಕ್ಷ್ಮಣ, ಸುಮಿ ತ್ರಾ ಸಂಜಯ, ಜಗದೇವಿ ಸಾಯಿಬಣ್ಣ, ಮೋನಿಕಾ ಅವಿನಾಶ, ಮೀನಾಕ್ಷಿ ಭಗವಾನ, ರೇಷ್ಮಾ ಶರತ್, ಜಗದೇವಿ ಸಂಜು ಕುಮಾರ, ಪೂರ್ಣಿಮಾ ಸಂಗಣ್ಣ, ರಂಜಿತಾ ರಾಜಕುಮಾರ, ಮೀನಾಕ್ಷಿ ಮಹೇಶ, ವಿಜಯಲಕ್ಷ್ಮಿ ಮೋನಪ್ಪ, ಸುರೇಖಾ ಕೊಳ್ಳಪ್ಪ, ಲಕ್ಷ್ಮಿ ಆಡೆನೂರ, ಲತಾ ಧರ್ಮರಾಜ, ಅಂಬಿಕಾ ತಿಪ್ಪಯ್ಯ, ಮುತ್ತಮ್ಮ ಯಶ್ವಂತ, ಕವಿತಾ ಮಾಳಪ್ಪ, ಸುಧಾ ಬಾಯಿ ಸಂಜು, ಸಿದ್ದಮ್ಮ ಚಂದ್ರಕಾಂತ, ಪ್ರಿಯಾಂಕ ಸುತಾರ ರೇಷ್ಮಾ ನಿಂಗಣ್ಣ, ಪಾರ್ವತಿ ನಿಂಗಪ್ಪ, ಭಾಗ್ಯಶ್ರೀ ಬಾಬುರಾಯ, ರತ್ನಮ್ಮ, ಲಕ್ಷ್ಮೀ ಅರುಣಕುಮಾರ ಸ್ವಚ್ಛ ಮಹಿಳಾ ಚಾಲಕರು ವಿವಿಧ ಗ್ರಾಮ ಪಂಚಾಯತ್ ಚಾಲಕರಿಗೆ ಮಹಿಳಾ ಚೇತನ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು.

ಪ್ರಾರ್ಥನೆಯನ್ನು ಸಂತೋಷ ಸಲ್ಲಿಸಿದರು. ಡಾ.ಸಿದ್ಧಪ್ಪ ಹೊಸಮನಿ ಸ್ವಾಗತಿಸಿದರು. ಡಾ.ಶೀಲಾದೇವಿ ಬಿರಾದಾರ ನಿರೂಪಿಸಿದರು. ದೇವರಾಜ ಕನ್ನಡಿಗ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News