ಕಲಬುರಗಿ | ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕು : ಬಾಬುರಾವ್ ಜಮಾದಾರ
ಕಲಬುರಗಿ : ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಲೆಕ್ಕ ಪರಿಶೋಧಕ ಬಾಬುರಾವ್ ಜಮಾದಾರ ತಿಳಿಸಿದರು.
ಅಫಜಲ್ ಪುರ ಪಟ್ಟಣದ ಮಾತೋಶ್ರೀ ಮನೋರಮಾ ಮಧ್ವರಾಜ ಪ್ರೌಢ ಶಾಲೆಯಲ್ಲಿ ಜಮಾದಾರ ಕುಟುಂಬ ಪ್ರತಿಷ್ಠಾನದ ವತಿಯಿಂದ ಪತ್ರಕರ್ತ ಸೂರ್ಯಕಾಂತ ಜಮಾದಾರ ಅವರ ತಂದೆ ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿಯಾಗಿದ್ದ ದಿ.ಮಲಕಪ್ಪ ಹಣಮಂತ ಜಮಾದಾರ ಇವರ ಪ್ರಥಮ ಪುಣ್ಯ ಸ್ಮರಣೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ʼಬೆಸ್ಟ್ ಪೊಲೀಸ್ ಪ್ರಶಸ್ತಿʼ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಜೀವನದಲ್ಲಿ ಮಕ್ಕಳ ಮೊದಲ ಪಾಠ ಶಾಲೆ ಮನೆ. ಬಾಲ್ಯದ ಜೀವನ ಆರಂಭವಾಗುವುದು ತಂದೆ ತಾಯಿಯ ಆಶ್ರಯದಲ್ಲಿ, ಪ್ರತಿಯೊಂದು ಸಂಸ್ಕಾರಗಳು ಬೆಳೆಯುವುದು ಮನೆಯಿಂದಲೇ. ಹೀಗಾಗಿ ತಂದೆ ತಾಯಿ ಬುದ್ಧಿ ಮಾತು ನಮ್ಮನ್ನು ಮತ್ತಷ್ಟು ಸಶಕ್ತರನ್ನಾಗಿ ಮಾಡುತ್ತವೆ. ಅವರ ಆದರ್ಶಮಯ ಬದುಕನ್ನು ಜೀವನದಲ್ಲಿ ಅಳವಡಿಕೊಂಡಾಗ ಮಾತ್ರ ಸಮಾಜಮುಖಿ ಬೆಳೆಯಲು ಸಾಧ್ಯವಾಗುವುದು ಎಂದು ತಿಳಿಸಿದರು.
ದಿ.ಮಲಕಪ್ಪ ಜಮಾದಾರ ಅವರ ವ್ಯಕ್ತಿತ್ವ ಪರಿಚಯವನ್ನು ಸಂಸ್ಥೆಯ ಶಿಕ್ಷಕ ಎಸ್.ಎಂ ಕರಿಕಲ್ ಮಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಯಂಕಂಚಿ ವಹಿಸಿಕೊಂಡರು. ಮುಖ್ಯ ಅತಿಥಿ ಸ್ಥಾನವನ್ನು ಲಕ್ಷ್ಮೀ ಎಂ.ಜಮಾದಾರ, ರಮೇಶ ಜಮಾದಾರ ಹಾಗೂ ಪಂಚಾಕ್ಷರಿ ಜಮಾದಾರ ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ "ಬೆಸ್ಟ್ ಪೊಲೀಸ್" ಪ್ರಶಸ್ತಿಗೆ ಭಾಜನಾರಾದ ಎಚ್.ಸಿ.ಶ್ರೀಕಾಂತ ಖಾನಾಪೂರ, ಎಚ್.ಸಿ ಬಸವರಾಜ ಹೆಡಗಿಜೋಳ, ಪಿ.ಸಿ ಮಲ್ಲಿನಾಥ ಹತ್ತಿ, ಪಿ.ಸಿ ಶಿವಾನಂದ ದೇಸುಣಗಿ, ಪಿ.ಸಿ ನಿಂಗಣ್ಣ ಪೂಜಾರಿ ಸೇರಿದಂತೆ ನಿವೃತ್ತ ಪೆÇಲೀಸ್ ಸಿಬ್ಬಂದಿಗಳಾದ ಶರಣಪ್ಪ ಯಾತನೂರ, ವಿಠ್ಠಲ ಅಂಬೂರೆ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಸೂರ್ಯಕಾಂತ ಎಂ.ಜಮಾದಾರ, ಮುಖ್ಯ ಶಿಕ್ಷಕ ಬಸವರಾಜ ನಿಂಬರ್ಗಿ, ಎ.ಜಿ ನೆಲ್ಲಗಿ, ಎಸ್.ಸಿ ಕುಲಕರ್ಣಿ, ಎಂ.ಕೆ ಪಡಸಲಗಿ, ಪ್ರಭಾಕರ ಯಂಕಂಚಿ, ಎ.ವಿ.ರಾಠೋಡ, ಸಂಗೀತಾ ನಾಟೀಕಾರ, ಗಾಯತ್ರಿ ದಳವಾಯಿ, ಈರಯ್ಯ ಗಂಗನಳ್ಳಿ, ಸುಭಾಶ ಕೋಳಿ ಅನೇಕರಿದ್ದರು.