ಕಲಬುರಗಿ | ಜಾನಪದದಲ್ಲಿ ಮಾನವೀಯ ಮೌಲ್ಯಗಳು ಒಳಗೊಂಡಿದೆ : ಯಲ್ಲಪ್ಪ ನಾಯ್ಕೋಡಿ
ಕಲಬುರಗಿ : ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವೀಯ ಮೌಲ್ಯ ಅಡಕವಾಗಿವೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ ಹೇಳಿದ್ದಾರೆ.
ಪ್ರಬುದ್ಧ ಸಾಂಸ್ಕೃತಿಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮರತೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಇಂದಿನ ಯುವಕ ಯುವತಿಯರು ಮುಂದಾಗ ಬೇಕಿದೆ, ಗ್ರಾಮೀಣ ಭಾಗದ ಪ್ರತಿ ಹೆಣ್ಣುಮಕ್ಕಳು ಪ್ರತಿ ಕಾರ್ಯಗಳಲ್ಲಿ ಜಾನಪದ ಹಾಡುವ ಮೂಲಕ ಸಂಭ್ರಮಿಸುತ್ತಿದ್ದರು. ಈಗಿನ ದಿನಗಳಲ್ಲಿ ಕೇವಲ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅದನ್ನು ಬಿಟ್ಟು ಜಾನಪದಕ್ಕೆ ಮೈಗೂಡಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಬಸಯ್ಯ ಗುತ್ತೆದಾರ ತೆಲ್ಲೂರ, ದತ್ತರಾಜ ಕಲಶೆಟ್ಟಿ ಬಂದರವಾಡ, ಬಾಬುರಾವ ಕೊಬಾಳ, ಸಂಜು ಬರಗಾಲಿ, ಸುಪ್ರಿಯಾ ಮೊಹನ, ಪ್ರಿಯಾಂಕಾ ಬಿ., ಈರಮ್ಮ ಸ್ಥಾವರಮಠ, ನಾಗಲಿಂಗಯ್ಯ ಸ್ಥಾವರಮಠ ಸುಂಟನೂರ, ಸಚಿನ ಶಿರವಾಳ. ವಿಜಯಕುಮಾರ್ ತೆಗಲತಿಪ್ಪಿ, ಡಾ.ವಾಸುದೇವ ಸೇಡಂ, ಎಂ.ಬಿ.ಲಿoಗಪ್ಪ, ಚಂದ್ರಶೇಖರ ಬ್ಯಾಕೋಡ, ರಾಘವೇಂದ್ರ ಭುರ್ಲಿ, ನಾಗವೆಣಿ ಎಮ್ ಸೇರಿದಂತೆ ಇತರರು ಹಾಜರಿದ್ದರು.