ಕಲಬುರಗಿ: ಲಾರಿ-ಕಾರು ಢಿಕ್ಕಿ; ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಮೃತ್ಯು

Update: 2024-06-16 07:59 GMT

ಕಲಬುರಗಿ: ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಕ್ಲರ್ಕ್‌ ಮತ್ತು ಖಾಸಗಿ ಕಂಪ್ಯೂಟ‌ರ್ ಆಪರೇಟರ್ ಮೃತಪಟ್ಟಿರುವ ಘಟನೆ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ರಾತ್ರಿ 1 ಗಂಟೆ ಸುಮಾರಿಗೆ ಜೇವರ್ಗಿ ವಿಜಯಪುರ ರಸ್ತೆಯ ನೆಲೋಗಿ ಕಮಾನ್ ಹತ್ತಿರ ಈ ಅಪಘಾತ ಸಂಭಿಸಿದ್ದು, ಮೃತರು ಯಾದಗಿರಿ ಜಿಲ್ಲಾಧಿಕಾರಿ ಕಾರ್ಯಾಲಯದ ಫಸ್ಟ್‌ಗ್ರೇಡ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಕಾಂತಯ್ಯ ತಂದೆ ಶಿವಾನಂದ ಸ್ವಾಮಿ (34) ಮತ್ತು ಖಾಸಗಿ ಕಂಪ್ಯೂಟರ್‌ ಆಪರೇಟರ್‌ ಲೋಕೇಶ್ ಬಸವರಾಜ ಹಾಸನ್(35) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವನಿಗೆ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಎಸ್‌ಪಿ ಬಿಂದುರಾಣಿ, ಸಿಪಿಐ ರಾಜಾಸಾಬ್‌, ಗಜಾನನ್ ಬಿರಾದಾರ ಮತ್ತು ಸೋಮಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News