ಕಲಬುರಗಿ | ಪಿಕಲ್ ಬಾಲ್ ಚಾಂಪಿಯನ್ ಶಿಫ್ ಸ್ಪರ್ಧೆ

ಕಲಬುರಗಿ : ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಡಿವೈಎನ್‌ಕೆ ಹಾಗೂ ಪಿಕಲ್ ಬಾಲ್ ಅಸೋಸಿಯೇಷನ್ ವತಿಯಿಂದ ನಗರ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಿಕಲ್ ಬಾಲ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಲಬುರಗಿ ಯುವಕರು ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ಸ್ಪರ್ಧಿಸಿ, ಪ್ರಥಮ, ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಕೀರ್ತಿಯನ್ನು ತುಂದು ಕೊಟ್ಟಿರುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಲಬುರಗಿ ಕ್ರೀಡಾಂಗಣದ ಅಭಿವೃದ್ಧಿ ಮಾಡಲಾಗಿದ್ದು, ಇಲ್ಲಿನ ಕ್ರೀಡಾ ಪಟುಗಳಿಗೆ ಸಹಕಾರವಾಗಲಿದೆ ಎಂದು ಹೇಳಿದರು.
ಡಿವೈಎನ್‌ಕೆ ನಿರ್ದೇಶಕ ಡಾ.ಬಿ.ಎಸ್.ದೇಸಾಯಿ ಮಾತನಾಡಿ, ಚೇತನ್ ದೇಸಾಯಿ ಅವರು ಅಮೆರಿಕದಲ್ಲಿ ನಡೆದ ಟೆನ್ನಿಸ್ ಬಾಲ್ ಸ್ಪರ್ಧೆಯಲ್ಲಿ ಕಲಬುರಗಿಯನ್ನು ಪ್ರತಿನಿಧಿಸಿದರು. ಇನ್ನಷ್ಟು ಕ್ರೀಡಾ ಪಟುಗಳು ಜಿಲ್ಲೆಯಲ್ಲಿ ಹೊರಹೊಮ್ಮಲಿ ಎಂಬ ಸದ್ದೂದೇಶದಿಂದ ಕಲಬುರಗಿ ಪಿಕಲ್ ಬಾಲ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಸಿಇಓ ಚೇತನ್ ದೇಸಾಯಿ, ಸಿಒಒ ದೀಪಕ್ ದೇಸಾಯಿ, ಸಂದೇಶ ಕಮಕನೂರ, ಸಂತೋಷ ಗುತ್ತೇದಾರ, ಪ್ರವೀಣ ಪುಣೆ, ಸಂಜಯ ಬಣಗಾರ್, ರಾಜು ಚವ್ಹಾಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.