ಕಲಬುರಗಿ | ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿಗೆ ʼರಹಮತುಲ್- ಲಿಲ್-ಆಲಮೀನ್ʼ ರಾಜ್ಯ ಪ್ರಶಸ್ತಿ ಪ್ರದಾನ
ಕಲಬುರಗಿ : ಗುಲ್ಬರ್ಗಾ ಸೀರತ್-ಉನ್-ನಬಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕರ್ನಾಟಕ, ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ಮತ್ತು ಮರ್ಕಝಿ ಸೀರತ್ ಸಮಿತಿ, ಗುಲ್ಬರ್ಗಾದ ಸಹಯೋಗದೊಂದಿಗೆ ಆಯೋಜಿಸಲಾದ 6ನೇ ಜಲ್ಸಾ ರಹಮತುಲ್-ಲಿಲ್-ಆಲಮೀನ್ (SAW) ಬಹುಮಾನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ 2025ನೇ ಸಾಲಿನ ʼರಹಮತುಲ್-ಲಿಲ್-ಆಲಮೀನ್ʼ ರಾಜ್ಯ ಪ್ರಶಸ್ತಿಯನ್ನು ಖಾಜಾ ಬಂದನವಾಜ್ ವಿಶ್ವವಿದ್ಯಾಲಯದ ಕುಲಪತಿ ಮತ್ತು ಖಾಜಾ ಎಜುಕೇಶನ್ ಸೊಸೈಟಿ ಅಧ್ಯಕ್ಷ ಹಾಗೂ ಹಜರತ್ ಖಾಜಾ ಬಂದನವಾಜ್ ದರ್ಗಾ(ರ.ಅ) ಸಜ್ಜಾದ ನಾಶಿನ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಮೊಹಮ್ಮದ್ ಅಸ್ಗರ್ ಚುಲ್ಬುಲ್, ಸೀರತ್-ಉನ್-ನಬಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕರ್ನಾಟಕ ಅಧ್ಯಕ್ಷ, ಖಾಜಾ ಬಂದನವಾಜ್ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ.ಸೈಯದ್ ಮುಸ್ತಫಾ ಅಲ್ ಹುಸೇನಿ ಸಾಹೇಬ್ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಜನಾಬ್ ಒಬೈದುಲ್ಲಾ ಖಾನ್ ಅಜ್ಮಿ ಸಾಹೇಬ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ರ ಬೋಧನೆಗಳಿಂದ ಪ್ರೇರಿತವಾದ ಶಿಕ್ಷಣ, ಸಂಶೋಧನೆ ಮತ್ತು ಸಮುದಾಯ ಸೇವೆಯ ಕೊಡುಗೆಗಳನ್ನು ಗೌರವಿಸಿ ಆಚರಿಸಲಾಯಿತು.