ಕಲಬುರಗಿ: ಪ್ರೀತಿಸಲು ಬಲವಂತಪಡಿಸಿದ ಯುವಕ; ನೊಂದ ಬಾಲಕಿ ಆತ್ಮಹತ್ಯೆ

Update: 2025-01-12 05:02 GMT

ಬಾಲಕಿಯ ಆತ್ಮಹತ್ಯೆ ಘಟನೆಗೆ ಸಂಬಂಧಿಸಿ ಜೇವರ್ಗಿ ಪಟ್ಟಣದ ಅಂಖಡೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸ್ಥಳೀಯರು.

ಕಲಬುರಗಿ: ಯುವಕನೋರ್ವ ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೇವರ್ಗಿ ಪಟ್ಟಣದ ಬಡಾವಣೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಘಟನೆಗೆ ಸಂಬಂಧಿಸಿ ಜೇವರ್ಗಿ ಪಟ್ಟಣದ ಬಸವೇಶ್ವರ ನಗರ ನಿವಾಸಿ ಮಹಬೂಬ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಎಂಟನೇ ತರಗತಿ ಓದುತ್ತಿರುವ 14 ವರ್ಷದ ಬಾಲಕಿಯೊಂದಿಗೆಗೆ ಈತ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದ್ದು,  ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶನಿವಾರ ರಾತ್ರಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲಕಿಯ ಆತ್ಮಹತ್ಯೆಗೆ ಕಾರಣನಾದ ಯುವಕನನ್ನು ಕೂಡಲೇ ಬಂಧಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾ ಸಭಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಸ್ಥಳೀಯ ನಾಯಕರು, ಶನಿವಾರ ಜೇವರ್ಗಿ ಪಟ್ಟಣದ ಅಂಖಡೇಶ್ವರ ವೃತ್ತದಲ್ಲಿ ಸುಮಾರು 2 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.

ಇದೀಗ ಆರೋಪಿಯನ್ನು ಬಂಧಿಸಿದ ಪೊಲೀಸರು, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ರಾಜ್ಯ ಕಾರ್ಯದರ್ಶಿ ರಾಜಶೇಖರ ಸಾಹು ಸೀರಿ, ವೀರಶೈವ ಲಿಂಗಾಯತ ಮಹಾ ಸಭಾ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ, ಷಣ್ಮುಖಪ್ಪ ಹಿರೇಗೌಡ, ಶರಣಬಸವ ಕಲ್ಲಾ, ರವಿ ಕೊಳಕೂರ, ಗುರುಗೌಡ ಮಾಲಿಪಾಟೀಲ, ಸಂಗನಗೌಡ ರದ್ದೇವಾಡಗಿ, ಭಿಮರಾಯ ನಗನೂರ, ರವಿ ಕುಳಗೇರಿ, ಸಿದ್ದು ಕೇರೂರ, ಮೋಹಿನುದ್ದಿನ್ ಇನಾಮಧಾರ, ಗುರುಲಿಂಗಯ್ಯ ಯನಗುಂಟಿ, ಮಲ್ಲಿಕಾರ್ಜುನ ಬಿರಾದಾರ, ಭಗವಂತರಾಯ ಶಿವಣ್ಣೋರು, ಸೋಮಶೇಖರ ಪಾಟೀಲ ಗುಡೂರ, ಸಂಗನಗೌಡ ಪಾಟೀಲ ಅವರಾದ, ಸಿದ್ದು ಮದರಿ, ಬಿ. ಎಚ್. ಮಾಲಿಪಾಟೀಲ, ಅಖಂಡು ಶಿವಣ್ಣಿ, ಅಖಂಡು ಹಿರೇಗೌಡ, ಅಬ್ದುಲ್ ರೌಫ್ ಹವಾಲ್ದಾರ, ರಹೇಮಾನ ಪಟೇಲ್, ಈಶ್ವರ ಹಿಪ್ಪರಗಿ, ಮಲ್ಲಿಕಾರ್ಜುನ ಅಡ್ವಾನಿ, ಬೆಣ್ಣೆಪ್ಪ ಕೊಂಬಿನ, ನಾಗರಾಜ ಓ, ಪರಮಾನಂದ ಯಲಗೋಡ, ಬಸವರಾಜ ಸೂಗೂರ, ರೇವಣಸಿದ್ಧ ಅಕ್ಕಿ, ಸಿದ್ದು ಮಸ್ಕಿ, ಸಾಗರ ಬಡಿಗೇರ, ವಿಶ್ವನಾಥ ಹಳಿಮನಿ, ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News