ಕಲಬುರಗಿ | ವಿವೇಕಾನಂದರ ಜೀವನ ಚರಿತ್ರೆ ಇಣುಕಿ ನೋಡುವ ಅಗತ್ಯವಿದೆ : ಮಕಾಲೆ

Update: 2025-01-12 15:24 GMT

ಕಲಬುರಗಿ : ವೀರ ಸನ್ಯಾಸಿ ವಿವೇಕಾನಂದರಲ್ಲಿನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂಥ ಹಾಗೂ ಅವರ ಜೀವನ ಚರಿತ್ರೆಯಲ್ಲಿ ಇಣುಕಿ ನೋಡುವಂಥ ಅಗತ್ಯತೆ ಯುವಕರಿಗಿದೆ ಎಂದು ಪಿಎಸ್ಐ ಚಂದ್ರಕಾoತ ಮಕಾಲೆ ಹೇಳಿದರು.

ಹಳೆಶಹಾಬಾದನ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯ ನಿಮಿತ್ತ ಆಯೋಜಿಸಲಾದ ರ್ಯಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ಸಂಸ್ಕೃತಿ ಹಾಗೂ ವೈಚಾರಿಕ ಚಿಂತನೆಗಳ ಮೂಲಕ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ ವಿವೇಕಾನಂದರು ನಮಗೆಲ್ಲರಿಗೂ ಆದರ್ಶ. ಸಮಾಜಕ್ಕಾಗಿ ಬದುಕುವ, ದೇಶಕ್ಕಾಗಿ ದುಡಿಯುವ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ದೇಶದ ಚಿತ್ರಣ ಬದಲಿಸಬಹುದು. ಆದರೆ ಇಂದು ನಾವು ಮತ್ತು ನಮ್ಮ ಕುಟುಂಬ ಚೆನ್ನಾಗಿದ್ದರೆ ಸಾಕು ಎನ್ನುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಹೇಳಿದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವಶರಣಪ್ಪ.ಆರ್.ಜಾಯಿ, ಯುವ ಮುಖಂಡ ಶ್ರೀನಾಥ ಪಾರಾ, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಮರುಳಾರಾಧ್ಯ ಮಠಪತಿ, ಕಾರ್ಯದರ್ಶಿ ಆಕಾಶ.ಆರ್.ಹೊರಗಿನಮನಿ, ಬಾಬು ಸುಬೇದಾರ,ಹಣಮಂತ ಡೆಂಗಿ, ಶ್ರೀಶೈಲ ನಂದಿ, ಮಲ್ಲಿಕಾರ್ಜುನ ಮಾಡ್ಯಾಳ, ರಾಮು ಗೋಟೆಕರ್, ಎಮ್.ಡಿ.ಇರ್ಪಾನ್, ರಾಜಶೇಖರ ವಂಸoಗ, ಶಿವಕುಮಾರ ಧಾಮಾ ಸೇರಿದಂತೆ ಆಟೋ ಚಾಲಕರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News