ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಾಧಕ ವಿವೇಕಾನಂದರು : ನಿಂಗಣ್ಣ ಹುಳಗೋಳಕರ್
ಕಲಬುರಗಿ : ದೇಶದ ಸಂಸ್ಕೃತಿ ಮತ್ತು ಗೌರವವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಸಾಧಕರಾದ ವಿವೇಕಾನಂದರ ದೇಶ ಪ್ರೇಮ ಮತ್ತು ಈ ಮಣ್ಣಿನ ಬಗ್ಗೆ ಅವರಿಗಿದ್ದ ಧನ್ಯತಾ ಭಾವನೆ ಇಂದಿನ ಯುವಕರಲ್ಲಿ ಬೆಳೆಯಬೇಕಿದೆ ಎಂದು ಶಹಾಬಾದ್ ಮಂಡಲದ ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು.
ಶಹಾಬಾದ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಸ್ವಾಮಿ ವಿವೇಕಾನಂದರವರ 162ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜನಾಂಗಕ್ಕೆ ದೇಶದ ಭವಿಷ್ಯವನ್ನೇ ಬದಲಾಯಿಸುವ ಶಕ್ತಿ ಇದ್ದು, ಆ ಶಕ್ತಿಯ ಮಹತ್ವವನ್ನು ಯುವ ಜನಾಂಗ ಅರಿಯಬೇಕಾಗಿದೆ. ನಮ್ಮೊಳಗೆ ಅಗಾಧವಾದ ಅತಿ ಅದ್ಭುತ ಶಕ್ತಿ ಇದೆ. ಅದನ್ನು ಅರಿತು ನಡೆದಾಗ ಮಾತ್ರ ನಮ್ಮ ವ್ಯಕ್ತಿತ್ವ ರೂಪಗೊಳ್ಳಲು ಸಾಧ್ಯ. ಹಾಗೇ ನಾವು ಅಂದುಕೊoಡ ಕಾರ್ಯವು ಎಲ್ಲ ಫಲಿಸುತ್ತದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಶರಣು ವಸ್ತ್ರದ್, ಮಹಾದೇವ ಗೊಬ್ಬೂರಕರ, ರವಿ ರಾಠೋಡ, ಸದಾನಂದ ಕುಂಬಾರ, ರಾಜು ಮಾನೆ, ನಾರಾಯಣ ಕಂದಕೂರ, ಅರುಣ ಪಟ್ಟಣಕರ, ಕನಕಪ್ಪ ದಂಡಗುಲಕರ, ಚಂದ್ರಕಾoತ ಗೊಬ್ಬೂರಕರ, ಸೂರ್ಯಕಾಂತ ವಾರದ, ಯಲ್ಲಪ್ಪ ದಂಡಗುಲಕರ, ಅಮರ ಕೊರೆ, ಭೀಮಯ್ಯ ಗುತ್ತೆದಾರ, ಕಾಶಣ್ಣ ಚನ್ನೂರ, ಬಸವರಾಜ ತರನಳ್ಳಿ, ರಾಮು ಕುಸಾಳೆ, ಕ್ರಿಷ್ಣ ಮಾನೆ, ರೇವಣಸಿದ್ದ ಮತ್ತಿಮಡು, ದತ್ತಾತ್ರೇಯ ಘಂಟಿ,ಉಮೇಶ್ ನಿಂಬಾಳಕರ, ಶ್ರೀ ನೀವಾಸ ನೆದಲಗಿ, ಶ್ರೀನಿವಾಸ ದೇವಕರ, ಶರಣು ಕೌಲಗಿ, ಮೊಹನ ಹಳ್ಳಿ, ನಾಗರಾಜ ಮುದ್ನಾಳ, ಶರಣು ಜಾಲಳ್ಳಿ, ಶಶಿಕಲಾ ಸಜ್ಜನ, ನಂದಾ ಗುಡೂರ, ಪದ್ಮಾ ಕಟಗೆ, ವಿಜಯಲಕ್ಷ್ಮಿ ನಂದಿ, ಸನ್ನಿಧಿ ಕುಲಕರ್ಣಿ, ಬಸಮ್ಮ ನಂದಿ,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ದೇವದಾಸ ಜಾಧವ ನಿರೂಪಿಸಿ, ಸ್ವಾಗತಿಸಿದರು. ಬಸವರಾಜ ಬಿರಾದಾರ ವಂದಿಸಿದರು.