ಕಲಬುರಗಿ | ರಾಷ್ಟ್ರೀಯ ಮತದಾರರ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ತೇಜಸ್ವಿನಿ
ಕಲಬುರಗಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಮತ್ತು ಚುನಾವಣಾ ಸಾಕ್ಷರತಾ ಸಂಘಗಳ ಸಹಯೋಗದಲ್ಲಿ ಕಲಬುರಗಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಜೇವರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ತೇಜಸ್ವಿನಿ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
ರೀಲ್ಸ್ ಸ್ಪರ್ಧೆಯಲ್ಲಿ ಬೀರಲಿಂಗ ಮತ್ತು ತಂಡದವರು ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಚುನಾವಣಾ ಸಾಕ್ಷರತಾ ಸಂಘದ ಸಮನ್ವಯಾಧಿಕಾರಿ ಡಾ.ಖಾಜಾವಲಿ ಈಚನಾಳ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಾ ಅಸ್ಟಿಗೆ, ಐಕ್ಯೂಏಸಿ ಸಂಚಾಲಕರಾದ ಡಾ.ಶರಣಪ್ಪ ಸೈದಾಪುರ, ಹಿರಿಯ ಪ್ರಾಧ್ಯಾಪಕರಾದ ಡಾ.ರಾಬಿಯಾ ಬೇಗಂ, ಡಾ.ಲಕ್ಷ್ಮಣ ಭೋಸ್ಲೆ, ಡಾ.ವಿನೋದ ಕುಮಾರ್, ಡಾ. ಖುತೇಜಾ ನಸ್ರೀನ್, ಡಾ.ಶ್ರೀಧರ್, ಡಾ.ಶರಣಪ್ಪ ಗುಂಡಗರ್ತಿ ಹಾಗೂ ಇನ್ನಿತರರು ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.