ಕಲಬುರಗಿ | ಡಾ.ಬಿ.ಆರ್ ಅಂಬೇಡ್ಕರ್‌ ಅವರಿಗೆ ಅವಹೇಳನ ಆರೋಪ : ಮೂವರ ವಿರುದ್ಧ ಪ್ರಕರಣ ದಾಖಲು

Update: 2024-02-21 08:17 GMT

ಕಲಬುರಗಿ: ಮಹಾನಗರ ಪಾಲಿಕೆಯ ಕೆ.ಎ.ಎಸ್ ಅಧಿಕಾರಿಯಾಗಿರುವ ಬಿಜೆಪಿ ಶಾಸಕ ಶರಣು ಸಲಗರ್ ಅವರ ಪತ್ನಿ ಮತ್ತು ಪಾಲಿಕೆಯ ವ್ಯವಸ್ಥಾಪಕನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಅಮಾನತು ಮಾಡಬೇಕು. ಅಲ್ಲದೆ, ಇಬ್ಬರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ್ ದರ್ಗಿ ಅವರು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರ್ನಾಟಕ ಸರಕಾರ ರಾಜ್ಯಾದ್ಯಂತ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ರವರು ಬರೆದಿರುವ ಸಂವಿಧಾನ ಜಾಥಾ ಕಾರ್ಯಕ್ರಮದ ಮೂಲಕ ಇಡೀ ಸಂವಿಧಾನ ಅರಿವು ಮತ್ತು ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ ಅವರ ಕೊಡುಗೆಯನ್ನು ಕರ್ನಾಟಕದ ಜನತೆಯ ಮನೆ ಮನೆಗೆ ತಲಪುವಂತೆ ಮಾಡುತ್ತಿದೆ. ಜಿಲ್ಲಾದ್ಯಂತ ಮತ್ತು ಮಹಾನಗರ ಪಾಲಿಕಯಿಂದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ.

ಪಾಲಿಕೆ ಕಚೇರಿಯ ವ್ಯವಸ್ಥಾಪಕ ಅಂಬಾದಾಸ ಖತಾಲ್, ಕರ ವಸೂಲಿಗಾರರಾದ ಅರ್ಜುನ ಗೋಳಾ ಹಾಗೂ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ ಮಹಿಳಾ ಕೆ.ಎ.ಎಸ್ ಅಧಿಕಾರಿ ಸಾವಿತ್ರಿ ಅವರು ನೆಡೆಸಿರುವ ಕಾನ್ಫರೆನ್ಸ್ ಕರೆಯಲ್ಲಿ ಹಾಸ್ಯಾಸ್ಪದವಾಗಿ ಮಾತನಾಡಿ ಸಂವಿಧಾನಕ್ಕೆ ಅಗೌರವ ತಂದು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದೂರುನಲ್ಲಿ ತಿಳಿಸಿದ್ದಾರೆ.

ಸಂಭಾಷಣೆಯಲ್ಲಿ ತೊಡಗಿದ ಪಾಲಿಕೆ ವ್ಯಸ್ಥಾಪಕನ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಈ ಕೂಡಲೇ ಸೇವೆಯಿಂದ ವಜಾ ಮಾಡಬೇಕು ಆಗ್ರಹಿಸಿದ್ದಾರೆ. ಇನ್ನಿಬ್ಬರು ಅಧಿಕಾರಿ ವಿರುದ್ದ ಕಲಂ 295 295(A) ಸಂಗಡ 34 ಐಪಿಸಿ ಮತ್ತು ಕಲಂ 3(1)(V) ಎಸ್ಸಿ-ಎಸ್ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News