ಕಲಬುರಗಿ ಜಿಮ್ಸ್ ಆಸ್ಪತ್ರೆ ಐಸಿಯು ವಾರ್ಡ್‌ನಲ್ಲಿ ಕೆಟ್ಟ ಎಸಿ ; ಮನೆಯ ಫ್ಯಾನ್ ಹಾಕಿ ಚಿಕಿತ್ಸೆ

Update: 2024-03-19 17:59 GMT

ಕಲಬುರಗಿ: ನಗರದ ಪ್ರತಿಷ್ಠಿತ ಸರಕಾರಿ ಜಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಒಂದು ತಿಂಗಳಿಂದ ಏರ್‌ ಕೂಲರ್‌ಗಳು ಕೆಟ್ಟಿರುವುದರಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಪರದಾಡುವ ಸ್ಥಿತಿ ಆಸ್ಪತ್ರೆಯಲ್ಲಿ ನಿರ್ಮಾಣವಾಗಿದೆ.

ಸುಮಾರು 14 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಐಸಿಯು ವಾರ್ಡ್ ಗಳಲ್ಲಿ ಸಮರ್ಪಕವಾಗಿ ಗಾಳಿಯ ವ್ಯವಸ್ಥೆ ಇಲ್ಲದೇ ರೋಗಿಗಳು ಮತ್ತು ಕುಟುಂಬದ ಸದಸ್ಯರು ಹೈರಾಣಾಗಿರುವ ಘಟ‌ನೆ ವರದಿಯಾಗಿದೆ.

ಜಿಲ್ಲೆಯಲ್ಲಿ ರಣ ಬಿಸಿಲಿಗೆ ಜನ ಕಂಗೆಟ್ಟು ಹೋಗಿದ್ದು, ಐಸಿಯು ವಿಭಾಗದಲ್ಲಿ ಜಿಮ್ಸ್ ಆಡಳಿತ ಮಂಡಳಿ ಕನಿಷ್ಠ ಫ್ಯಾನ್‌ಗಳ ವ್ಯವಸ್ಥೆ ಮಾಡದೇ ಇರುವುದರಿಂದ ರೋಗಿಗಳು ಕಂಗಾಲಗಿದ್ದಾರೆ. ಕೆಲ ರೋಗಿಯ ಸಂಬಂಧಿಕರು ಮನೆಯಿಂದಲೇ ಫ್ಯಾನ್‌ಗಳನ್ನು ತಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಐಸಿಯುನಲ್ಲಿ ಎಸಿ ಇಲ್ಲದೆ ಹಗಲು–ರಾತ್ರಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸರ್ಕಾರ ರೋಗಿಗಳ ಜತೆಗೆ ಚೆಲ್ಲಾಟ ಆಡುತ್ತಿದೆ ಎಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ‘ಐಸಿಯುನಲ್ಲಿ ಎ.ಸಿ.ಗಳು ಕೆಟ್ಟು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ತಕ್ಷಣ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೇ, 500 ಎಸಿಗಳನ್ನು ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News