ಕಲಬುರಗಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎಟಿಎಂ ಹಾನಿ
Update: 2025-02-06 15:34 IST

ಕಲಬುರಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎಟಿಎಂ ಬೆಂಕಿಗೆ ತುತ್ತಾಗಿರುವ ಘಟನೆ ಅಫ್ಝಲ್ ಪುರ ತಾಲೂಕಿನ ಗಾಣಗಾಪುರ ಎಂಬಲ್ಲಿ ನಡೆದಿದೆ.

ಗಾಣಗಾಪುರ ಬಸ್ ನಿಲ್ದಾಣದ ಎದುರಿಗಿರುವ ಇಂಡಿಯಾ ಬ್ಯಾಂಕ್ ನಂಬರ್ 1 ಎಟಿಎಂ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಎಟಿಎಂ ಸ್ವಲ್ಪ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಬೆಂಕಿ ತಗುಲಿದ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಗಾಣಗಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್ಸೈ ರಾಹುಲ್ ಪಾವುಡೆ, ಗಂಗಣ್ಣ, ಗುರುಪಾಟಿ, ಶಿವಾನಂದ ಪಾಟೀಲ್, ಶಿವು ಕಲ್ಲುರ ಸೇರಿದಂತೆ ಇತರ ಸಿಬ್ಬಂದಿ ಇದ್ದರು.