ಕಲಬುರಗಿಯಲ್ಲಿ ಪ್ರಧಾನಿ ಮೋದಿ 'ಗೋ ಬ್ಯಾಕ್' ಕೂಗು: ಕೆ.ನೀಲಾ ಸಹಿತ ಹಲವರು ಪೊಲೀಸ್ ವಶಕ್ಕೆ

Update: 2024-03-16 08:49 GMT

ಕಲಬುರಗಿ: ಲೋಕಸಭೆ ಚುನಾವಣೆಗೆ ಕಲಬುರಗಿಯಿಂದ ಪ್ರಚಾರ ಆರಂಭಿಸಲು ನಗರಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ 'ಗೋ ಬ್ಯಾಕ್ ಬ್ಯಾಕ್' ಘೋಷಣೆಗಳು ಕೂಗುವ ಮೂಲಕ ರೈತರು ಮತ್ತು ಪ್ರಗತಿಪರ ಒಕ್ಕೂಟದ ನೇತೃತ್ವದಲ್ಲಿ ಇಂದು ಬೆಳಗ್ಗೆ ನಗರದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದ ಜಗತ್ ವೃತದಲ್ಲಿ ಜಮಾಯಿಸಿದ ಸಿಪಿಎಂ ಪಕ್ಷದ ಮುಖಂಡರು MGNREGA ಬಾಕಿ ವೇತನ ಬಿಡುಗಡೆ, ಬರಗಾಲದ ಬರ ಪರಿಹಾರ ಹಣ ಬಿಡುಗಡೆ, ರೈತರ ಸಾಲ ಮನ್ನಾ, NMMS ರದ್ದತ್ತಿಗೆ, ತೊಗರಿಯ ನಾಡಿನಲ್ಲಿ ತೊಗರಿ ಬೆಳೆಗಾರರಿಗೆ MSP ಬೆಂಬಲ ಬೆಲೆ ನಿಗದಿ ಮಾಡಿ ಕನಿಷ್ಠ 12.000 ರೂ. ಘೋಷಣೆ, ಬೂಜ ರಸಗೊಬ್ಬರ ಔಷಧಿ ಬೆಲೆ ಏರಿಕೆ ತಡೆಗೆ ಕ್ರಮ, ಕೆಲಸ ಮಾಡಿದ ಬಾಕಿ ವೇತನ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ, ಕರ್ನಾಟಕ ಪ್ರಾಂತ ರೈತ ಸಂಘಟನೆ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, , ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಗುರುನಂದೇಶ ಕೋಣಿನ್, ಲವಿತ್ರ ವಸ್ತ್ರದ್, ಪ್ರಕಾಶ್ ಜಾನೆ, ಸಿದ್ಧರಾಮ ಹರವಾಳ, ಸುಜಾತಾ ಮತ್ತಿತರರನ್ನು ವಶಕ್ಕೆ ಪಡೆದರು.

ಟ್ರೇಡ್ ಯೂನಿಯನ್ ಮುಖಂಡರಾದ ಶಹನಾಝ್ ಅಖ್ತರ್, ಡಬ್ಲ್ಯುಪಿಐ ಪಕ್ಷದ ಮುಬಿನ್ ಅಹ್ಮದ್, ಎಸ್.ಎಫ್.ಐ ಕಾರ್ಯಕರ್ತರು ಸೇರಿದಂತೆ ಹಲವರು ಧರಣಿಯಲ್ಲಿ ಭಾಗವಹಿಸಿದ್ದರು. 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News