ಉರ್ದು ಪತ್ರಕರ್ತ ಸರ್ಮಸ್ತ್ ಬರವಣಿಗೆ ಕಾರ್ಯ ಶ್ಲಾಘನೀಯ : ಶಾಸಕ ಅಲ್ಲಮಪ್ರಭು ಪಾಟೀಲ್

Update: 2025-01-04 13:28 GMT

ಕಲಬುರಗಿ : ಹಿರಿಯ ಪತ್ರಕರ್ತರಾದ ಅಜೀಜುಲ್ಲಾ ಸರ್ಮಸ್ತ್ ಅವರ 47ನೇ ವರ್ಷಗಳ ಉರ್ದು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆ ಹಾಗೂ ಉರ್ದು ಪತ್ರಿಕೆಯಲ್ಲಿನ ಅವರ ಬರವಣಿಗೆ ಶ್ಲಾಘನೀಯವಾಗಿದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಯಾ ಸಾವೇರ ಸಂಘಟನೆ ಅರ್ಷದ ಇಸ್ಮಾಯಿಲ್ ಸ್ಮಾರಕ ಶಿಕ್ಷಣ ಮತ್ತು ಪೀಠಾಧಿಪತಿ ಟ್ರಸ್ಟ್ ಅಂಜುಮನ್ ತಾರಕ್ಕಿ ಉರ್ದು ಸಭಾಂಗದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅಜೀಜುಲ್ಲಾ ಸರ್ಮಸ್ತ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕುಡಾ ಅಧ್ಯಕ್ಷರಾದ ಮಜರ್ ಆಲಂ ಖಾನ್, ನಯಾ ಸವೇರ ಸಂಘಟನೆಯ ಅಧ್ಯಕ್ಷ ಮೊದೀನ್ ಪಟೇಲ್ ಅಣಬಿ, ಖ್ಯಾತ ಉದ್ಯಮಿ ಇಲಿಯಾಸ್ ಸೇಠ ಬಾಗಬಾನ್, ಅಬ್ದುಲ್ ಜಬ್ಬಾರ್ ಗೋಲಾ, ಮೋದಿ ಇಸ್ಮಾಯಿಲ್‌ ಸಾಜಿದ್ ರಂಜೋಳ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News