ಕಲಬುರಗಿ: ಇಟ್ಟಿಗೆಯಿಂದ ಜಜ್ಜಿ ಪತ್ನಿಯ ಹತ್ಯೆಗೈದ ಪತಿ

Update: 2024-10-03 16:25 GMT

ಕಲಬುರಗಿ: ಪತಿ ಮತ್ತು ಪತ್ನಿಯ ನಡುವೆ ಮಾತಿಗೆ ಮಾತು ಬೆಳೆದು ಪತ್ನಿಯನ್ನು ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಶಹಾಬಾದ ರಸ್ತೆಯಲ್ಲಿ ಬಡಾವಣೆಯಲ್ಲಿ ನಡೆದಿದೆ.

ಮೂಲತಃ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದ ನಿವಾಸಿ ಶಹಾಬಾದ ಪ್ರದೇಶದ ಇಟ್ಟಿಗೆ ಕಾರ್ಖಾನೆಯ ಮನೆಯಲ್ಲಿ ವಾಶಿಸುತ್ತಿದ್ದ ಪ್ರಿಯಾಂಕಾ ರಾಠೋಡ್ (26) ಹತ್ಯೆಯಾದ ಮಹಿಳೆ. ಬುಧವಾರ ದಂಪತಿಯ ನಡುವೆ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ವಕೀಲ್ ರಾಠೋಡ್ ಇಟ್ಟಿಗೆಯಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಲಬುರಗಿ ವಿಶ್ವ ವಿದ್ಯಾಲಯದ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News