ಕಾಸರಗೋಡು | ಬೈಕ್-ಲಾರಿ ಢಿಕ್ಕಿ ; ಸವಾರ ಮೃತ್ಯು
Update: 2025-03-17 15:53 IST

ರವಿಚಂದ್ರ
ಕಾಸರಗೋಡು : ಬೈಕ್ ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಶಿರಿಯ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ನಡೆದಿದೆ.
ಮೃತರನ್ನು ಕುಂಬಳೆ ಕಣ್ಣೂರಿನ ತ್ಯಾಂಪಣ್ಣ ಪೂಜಾರಿ ರವರ ಪುತ್ರ ರವಿಚಂದ್ರ (35) ಎಂದು ಗುರುತಿಸಲಾಗಿದೆ.
ಕುಂಬಳೆ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಕುಂಬಳೆ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.