ಕಾಸರಗೋಡು| ವರ್ಕಾಡಿ ಚರ್ಚ್ ನ ಕಾಣಿಕೆ ಡಬ್ಬಿ ಕಳವು

Update: 2024-10-21 12:13 GMT

ಕಾಸರಗೋಡು: ವರ್ಕಾಡಿ ಸೆಕ್ರಡ್ ಆರ್ಟ್ ಆಫ್ ಜೀಸಸ್ ಚರ್ಚ್ ನ ಕಾಣಿಕೆ ಡಬ್ಬಿ ಕಳವು ನಡೆದ ಘಟನೆ ಇಂದು ಮುಂಜಾನೆ ನಡೆದಿದೆ. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ಸ್ಕೂಟರ್ ನಲ್ಲಿ ಬಂದ ಕಳ್ಳನೋರ್ವ ಈ ಕೃತ್ಯ ನಡೆಸಿದ್ದು, ಚರ್ಚ್ ಮುಂಭಾಗದ ಪ್ರವೇಶ ದ್ವಾರದ ಬಳಿಯ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆಸಿದ್ದಾನೆ.ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಸಿಸಿಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ. ಕಾಣಿಕೆ ಡಬ್ಬಿಯನ್ನು ಚರ್ಚ್ ಆವರಣದಲ್ಲಿ ಎಸೆದು ಪರಾರಿಯಾಗಿದ್ದಾನೆ.

ಬೆಳಿಗ್ಗೆ ಬಲಿಪೂಜೆಗೆ ಆಗಮಿಸಿದ ಭಕ್ತರು ಗಮನಿಸಿ ಧರ್ಮ ಗುರು ಫಾ. ಬಾಸಿಲ್ ವಾಸ್ ರವರಿಗೆ ಮಾಹಿತಿ ನೀಡಿದ್ದು, ಬಳಿಕ ಚರ್ಚ್ ಪಾಲನಾ ಸಮಿತಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News