ಮಡಿಕೇರಿ | ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕ ನೀರು ಪಾಲು
Update: 2024-03-20 11:22 GMT
ಮಡಿಕೇರಿ : ಸ್ನಾನಕ್ಕೆಂದು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಗುಡ್ಡೆಹೊಸೂರು ಬಳಿ ಕಾವೇರಿ ನದಿಯಲ್ಲಿ ನಡೆದಿದೆ.
ಮೃತನನ್ನು ಏಳನೇ ಹೊಸಕೋಟೆಯ ತೊಂಡೂರು ನಿವಾಸಿ ಸುರೇಶ್ ಆಚಾರ್ಯ ಎಂಬುವವರ ಪುತ್ರ ಪ್ರದೀಪ್ (19) ಎಂದು ಗುರುತಿಸಲಾಗಿದೆ.
ಬುಧವಾರ ತನ್ನ ಸ್ನೇಹಿತರೊಂದಿಗೆ ಗುಡ್ಡೆಹೊಸೂರು ಸಮೀಪದ ಬಾಳುಗೋಡು ಎಂಬಲ್ಲಿಗೆ ತೆರಳಿದ ಪ್ರದೀಪ್ ಕಾವೇರಿ ನದಿಗೆ ಇಳಿದಿದ್ದ. ಈ ಸಂದರ್ಭ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ. ಮೀನಿಗೆ ಹಾಕಿದ್ದ ಗಾಳದ ವಯರ್ ಪ್ರದೀಪ್ ನ ಕುತ್ತಿಗೆಗೆ ಸಿಲುಕಿತ್ತು ಎಂದು ಹೇಳಲಾಗಿದೆ.
ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊರತೆಗೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.