ಎ.26ರಿಂದ ಮೇ 3: ಎಮ್ಮೆಮ್ಮಾಡು ಮಖಾಂ ಉರೂಸ್

Update: 2024-04-23 10:29 GMT

ಮಂಗಳೂರು, ಎ. 23: ಇತಿಹಾಸ ಪ್ರಸಿದ್ಧ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಹಝ್ರತ್ ಸೂಫಿ ಶಹೀದ್ ಮತ್ತು ಹಝ್ರತ್ ಸೈಯದ್ ಹಸನ್ ಸಖಾಫ್ ಹಾಗೂ ಇನ್ನಿತರ ಪ್ರಮುಖ ಮಹಾತ್ಮರುಗಳ ಹೆಸರಿನಲ್ಲಿ ಪ್ರತಿ ವರ್ಷ ನಡೆಸುವ ಉರೂಸ್ ಕಾರ್ಯಕ್ರಮ ಎ. 26ರಿಂದ ಮೇ 3 ತನಕ ನಡೆಯಲಿದೆ.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ ಸಯ್ಯಿದ್ ಝಕರಿಯಾ ಸಅದಿ, ಎ. 26 ರಂದು ಕಾರ್ಯಕ್ರಮ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಪ್ರಾರಂಭಗೊಳ್ಳಲಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ಸೈಯ್ಯದ್ ಝೈನುಲ್ ಆಬಿದೀನ್ ಜಫ್ರಿ ತಂಳ್ ನೇತೃತ್ವ ವಹಿಸುವರು . ಎ. 29ರಂದು ಸಾರ್ವಜನಿಕ ಸಮ್ಮೇಳನ ನಡೆಯಲಿದೆ. ಅಧ್ಯಕ್ಷತೆಯನ್ನು ಸಯ್ಯಿದ್ ಆಟಕೋಯ ತಂಳ್ ಕುಂಬೋಳ್ ವಹಿಸುವರು. ಸಮ್ಮೇಳನ ಸೈಯ್ಯದ್ ಮುಈನಲಿ ಶಿಹಾಬ್ ತಂಳ್ ಪಾಲಕ್ಕಾಡ್ ಉದ್ಘಾಟನೆ ನೆರವೇರಿಸುವರು. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಹಾಗೂ ಮೌಲಾನ ಶಾಫಿ ಸಅದಿ ಬೆಂಗಳೂರು ಧಾರ್ಮಿಕ ಪ್ರವಚನ ನೀಡಿವರು. ವೇದಿಕೆಯಲ್ಲಿ ವಕ್ಫ್ ಸಚಿವ ಝಮೀರ್ ಅಹ್ಮದ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಮೇ 3ರಂದು ಸಮಾರೋಪ ಸಮಾರಂಭದಲ್ಲಿ ಬದುರುಸ್ಸಾದಾತ್ ಇಬ್ರಾಹಿಂ ಖಲೀಲ್ ತಂಳ್ ಮುಖ್ಯ ಪ್ರಭಾಷಣ ನೀಡಲಿದ್ದಾರೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ನಿಝಾರ್ ಜೌಹರಿ , ಜುಬೈರ್ ಸಿಎ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ರಾದ ಅಶ್ರಫ್ ಕಿನಾರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News