ಕೊಡಗು: ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತ್ಯು

Update: 2023-12-30 14:24 GMT

ಮಡಿಕೇರಿ: ಮೂವರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಬರಪೊಳೆ(ಕೊಂಕಣ ಹೊಳೆ) ನದಿಯಲ್ಲಿ ನಡೆದಿದೆ.

ಪೊನ್ನಂಪೇಟೆಯ ಸಿಐಟಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದ ಶ್ರೀಮಂಗಲ ನೆಮ್ಮಲೆ ಗ್ರಾಮದ ನಿವಾಸಿ  ರಶಿಕ್ ಕುಶಾಲಪ್ಪ(20), ಜೋಡುಬೀಟಿ ಗ್ರಾಮದ ಮಂಗೇಟಿರ ಪಿ.ಆಕಾಶ್ ಬಿದ್ದಪ್ಪ(20) ಹಾಗೂ ಶ್ರೀಮಂಗಲ ಗ್ರಾಮದ ಉಳುವಂಗಡ ಸುದೇಶ್ ಅಯ್ಯಪ್ಪ(20) ಎಂಬುವವರೇ ಮೃತ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ

ಪೊನ್ನಂಪೇಟೆ ಸಿಐಟಿ ಕಾಲೇಜ್ ನ ನಾಲ್ವರು ವಿದ್ಯಾರ್ಥಿಗಳು ಕಾಲೇಜ್ ನಿಂದ 5 ಕಿ.ಮೀ ದೂರದಲ್ಲಿರುವ ಬರಪೊಳೆಗೆ ತೆರಳಿದ್ದು, ಈ ಪೈಕಿ ಮೂವರು ನೀರಿಗೆ ಇಳಿದಿದ್ದರು ಎಂದು ಹೇಳಲಾಗಿದೆ. ಈ ವೇಳೆ ನೀರಿನ ಆಳಕ್ಕೆ ಸಿಲುಕಿ ಮೂವರು ಕೂಡ ಮೃತಪಟ್ಟಿದ್ದಾರೆ.

ಓರ್ವ ವಿದ್ಯಾರ್ಥಿ ಕಾಲು ನೋವಿನ ಕಾರಣದಿಂದ ನೀರಿಗೆ ಇಳಿಯದೆ ದಡದಲ್ಲಿ ಉಳಿದಿದ್ದಾನೆ.

 ಗೋಣಿಕೊಪ್ಪ ಠಾಣಾಧಿಕಾರಿ ಬಿ.ಎಸ್.ರೂಪಾದೇವಿ, ಪೊನ್ನಂಪೇಟೆ ಠಾಣಾಧಿಕಾರಿ ನವೀನ್, ಶ್ರೀಮಂಗಲ ಠಾಣಾಧಿಕಾರಿ ಶಿವಾನಂದ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News