ಸೋಮವಾರಪೇಟೆ | ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಮನೆ

Update: 2024-06-21 15:10 GMT

 ಹೊತ್ತಿ ಉರಿಯುತ್ತಿರುವ ಮನೆ

ಸೋಮವಾರಪೇಟೆ : ಆಕಸ್ಮಿಕ ಬೆಂಕಿಯಿಂದ ಮನೆಯೊಂದು ಹೊತ್ತಿ ಉರಿದಿರುವ ಘಟನೆ ಶುಕ್ರವಾರ ಮಧ್ಯಾಹ್ನ ಹಾನಗಲ್ಲು ಬಾಣೆಯಲ್ಲಿ ಸಂಭವಿಸಿದೆ.

 ಹೊತ್ತಿ ಉರಿದ ಮನೆ ಲೀಲಾವತಿ ಎಂಬವರಿಗೆ ಸೇರಿದ್ದಾಗಿದ್ದು, ಅವರು ಸೊಸೆಯೊಂದಿಗೆ ವಾಸವಾಗಿದ್ದರು. ಸೊಸೆ ಪಟ್ಟಣಕ್ಕೆ ತೆರಳಿದ್ದ ಸಂದರ್ಭ, ಲೀಲಾವತಿ ಮನೆಯ ಹೊರಗೆ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮನೆಗೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದ್ದು. ಟಿ.ವಿ. ಫ್ರಿಡ್ಜ್, ಬಟ್ಟೆ ಇತರ ಸಾಮಾಗ್ರಿಗಳು ಸುಟ್ಟ ಹೋಗಿವೆ ಎಂದು ತಿಳಿದು ಬಂದಿದೆ.

 ಹಳೆಯದಾದ ಹೆಂಚಿನ ಮನೆಯಾಗಿದ್ದು, ಮರಮುಟ್ಟುಗಳು ಗೆದ್ದಲು ಹಿಡಿದಿದ್ದ ಪರಿಣಾಮ, ಬೇಗನೆ ಬೆಂಕಿ ಹತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಬೆಂಕಿಯನ್ನು ಆರಿಸಿದ್ದು, ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News