ದಲಿತ ಯುವತಿಯ ಕೊಲೆ ಪ್ರಕರಣ: ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ದಲಿತ ಪರ ಸಂಘಟಗಳ ಪ್ರತಿಭಟನೆ
ಕೊಪ್ಪಳ: ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ದಲಿತ ಯುವಕನ ಕೊಲೆ ಹಾಗೂ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದ ದಲಿತ ಯುವತಿಯ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ದಲಿತ ಪರ ಸಂಘಟಗಳು ಪ್ರತಿಭಟನೆ ನಡೆಸಿದರು.
ಗಂಗಾವತಿ ನಗರದ ಅಂಬೇಡ್ಕರ್ ವೃತ್ತ ದಿಂದ ಬಾಬು ಜಗಜೀವನ್ ರಾವ್ ವೃತ್ತದವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಯಿತು.
ಸರ್ಕಾರಗಳು ಎಷ್ಟೇ ಏನೇ ಕಾನೂನುಗಳು ತಂದರು, ಮರ್ಯಾದೆಗೇಡು ಹತ್ಯೆ ಎನ್ನುವಂತಹ ಇಂತಹ ಸಾವುಗಳಿಂದ ದೂರಾಗುವುದು ಯಾವಾಗ ಎಂದು ದಲಿತ ಮುಖಂಡ ಕರಿಯಪ್ಪ ಗುಡಿಮನಿ ಅಸಮಾಧಾನ ವ್ಯಕ್ತಪಡಿಸಿದರು.
ವಾಲ್ಮೀಕಿ ಸಮುದಾಯಕ್ಕೆ ಸೇರಿದಂತಹ ಯುವಕ ಪರಿಶಿಷ್ಟ ಜಾತಿ( ಮಾದಿಗ) ಸಮುದಾಯದ ಯುವತಿಯನ್ನು ಕಾಡಿಸಿ ಪಿಡಿಸಿ ಪ್ರೀತಿಸಿ, ಕೊನೆಗೆ ಆ ಯುವಕನೇ ತನ್ನ ಪ್ರೀತಿಯನ್ನೇ ಮರೆತು ಜಾತಿ ಎಂಬ ಕಾರಣಕ್ಕೆ ಕೊಲೆಗೈದಿದ್ದಾನೆ. ಮದುವೆಯಾದ ಕೆಲ ದಿನಗಳಿಂದ ಮರಿಯಮ್ಮಳ ಗಂಡ ಹಾಗೂ ಅತ್ತೆ, ಮಾವ ಇತರರು ಸೇರಿ ಯುವತಿಗೆ ಮಾನಸಿಕ ಹಿಂಸೆ ನೀಡಿ, ಹೊಡೆದು ಬಡಿದು, ಜಾತಿನಿಂದನೆ ಮಾಡಿ ಕೊನೆಗೆ ಊಟದಲ್ಲಿ ವಿಷವುಣಿಸಿ ಹತ್ಯೆ ಮಾಡಿದ್ದಾರೆ ಎಂದು ದೂರಿದರು.
ಕೊಲೆಗೈದ 13 ಜನ ಆರೋಪಿಗಳ ಪೈಕಿಯಲ್ಲಿ ಕೇವಲ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸಿ ಗೆಲ್ಲು ಶಿಕ್ಷೆ ನೀಡಬೇಕೆಂದು ಸಾಂಕೇತಿಕ ಧರಣಿ ನಡೆಸಿ ತಹಶೀಲ್ದಾದರಗೆ ಮನವಿ ಸಲ್ಲಿಸಿದರು.