ಕೊಪ್ಪಳ | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ/ಕನಕಗಿರಿ : ಆ.1ರಂದು ಸುಪ್ರಿಂ ಕೋರ್ಟ್ ಒಳ ಮೀಸಲಾತಿ ಜಾರಿ ಮಾಡಲು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ತಿರ್ಪು ನೀಡಿದ್ದರೂ ಸಹ, ಕರ್ನಾಟಕ ಸರಕಾರ ಎಸ್ಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ವಿಳಂಬ ನೀತಿ ತೋರುತ್ತಿದೆ ಎಂದು ಮಾದಿಗ ದಂಡೋರ ರಾಜ್ಯಧ್ಯಕ್ಷ ನರಸಪ್ಪ ಹೇಳಿದರು.
ಮಾದಿಗೆ ದಂಡೋರ, ಮಾದಿಗ ಮೀಸಲಾತಿ ಹೋರಾಟ ಕೊಪ್ಪಳ ಜಿಲ್ಲಾ ಸಮಿತಿ, ಕನಕಗಿರಿ ವಿಧಾನಸಭಾ ಮಾದಿಗರ ಜಾಗೃತಿಯಿಂದ ಪ್ರತಿಭಟನೆಯ ಮೂಲಕ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರಿಗ ಮನವಿ ಸಲ್ಲಿಸಿ ಮಾತನಾಡಿದರು.
ಮಾದಿಗ ಸಮಾಜದ ಮುಂಖಂಡ ನರಸಪ್ಪ, ಜಿಲ್ಲಾಧ್ಯಕ್ಷ ಸುಭಾಸ ಕಂದಕೂರು, ಕಾರ್ಯದರ್ಶಿ ಗಂಗಾಣ್ಣ ಸಿದ್ದಪೂರ ಮಾತನಾಡಿ, ನಲವತ್ತು ವರ್ಷದ ಹೋರಾಟಕ್ಕೆ ಇನ್ನೂ ಫಲ ದೊರುಕುತ್ತಿಲ್ಲ ಸಾವಿರಾರೂ ಪ್ರಾಣ ತ್ಯಾಗ ಮಾಡಿದ್ದೇವೆ, ಸುಪ್ರಿಂ ಕೋರ್ಟ್ ನ ಆದೇಶ ವಿದ್ದರೂ ಸರ್ಕಾರ ಹಿಂದೇಟು ಹಾಕುತ್ತಿದೆ. ಚುನಾವಣೆಯಲ್ಲಿ ಮಾತ್ರ ನಮ್ಮನ್ನು ಉಪಯೋಗ ಮಾಡಿಕೊಳ್ಳುತ್ತಾರೆ, ಮಾದಿಗ ಸಮಾಜವನ್ನು ಕಡೆಗಣಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ಇಟಗಿಯ ಮಾತಂಗ ಮಹರ್ಷಿ ಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪರಶುರಾಮಪ್ಪ, ಪಟ್ಟಣ ಪಂಚಾಯತ್ ಸದಸ್ಯ ಹನುಮಂತಪ್ಪ ಬಸರಿಗಿಡದ, ಎಚ್.ಎನ್. ಬಡಿಗೇರ, ನರಸಪ್ಪ, ಮೌನೇಶ ದಢೇಸೂಗೂರು, ಗಂಗಣ್ಣ ಸಿದ್ದಾಪುರ, ಮಂಜುನಾಥ ಕೊಂಡಪಲ್ಲಿ, ಹನುಮಂತಪ್ಪ ಡಗ್ಗಿ, ಮೂರ್ತಿ ಸಂಗಾಪೂರ, ಮರಿಯಪ್ಪ ಲಕ್ಕುಂಪುರ, ಇಂಗಳದಾಳ ರಾಮಣ್ಣ, ನಿಂಗಪ್ಪ ಪೂಜಾರ, ವೆಂಕಟೇಶ ನೀರ್ಲೂಟಿ, ರಮೇಶ ಅಂಗಡಿ, ಮಂಜುನಾಥ, ತಾಲ್ಲೂಕು ಅಧ್ಯಕ್ಷರಾದ ಮಹಾದೇವ ಕಾಟಾಪುರ, ದುರುಗೇಶ ಕಂದಕೂರು, ಶಿವಣ್ಣ ಈಳಿಗನೂರು, ಇತರರು ಇದ್ದರು.