ʼಗ್ಯಾರೆಂಟಿʼ ಯೋಜನೆಗಳಿಂದ ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿದೆ : ಕಾಂಗ್ರೆಸ್ ಶಾಸಕ ರಾಘವೆಂದ್ರ ಹಿಟ್ನಾಳ್
Update: 2025-01-05 15:24 GMT
ಕೊಪ್ಪಳ : ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ದಿ ಕಾರ್ಯಗಳು ಕುಂಟಿತವಾಗಿವೆ ಎಂದು ಕಾಂಗ್ರೆಸ್ ಶಾಸಕ ರಾಘವೆಂದ್ರ ಹಿಟ್ನಾಳ್ ಅವರು ಹೇಳಿದ್ದಾರೆ.
ಕುಣಿಕೇರಿಯಲ್ಲಿ ವಿವಿಧ ಅಭಿವೃದ್ದಿಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಸ್ಥರು ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗೆ ಮನವಿಯನ್ನು ನೀಡಿದ್ದರು, ಅದನ್ನು ಸರ್ಕಾರದ ಜೊತೆ ಮಾತನಾಡಿ, ಮಂಜೂರು ಮಾಡಿಸುವ ಕೆಲಸ ಮಾಡುತ್ತೇನೆ ಎಂದರು.
ಕೆರೆತುಂಬಿಸುವ ಕೆಲಸ ಮಾಡಿದ್ದೇವೆ ಆದರೆ ಗ್ರಾರಂಟಿ ಯೋಜನೆಗಳಿಗೆ ವರ್ಷಕ್ಕೆ 54ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಹೆಣ್ಣು ಮಕ್ಕಳ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ. ಐದು ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರ ನೀಡಿದ್ದರಿಂದ ಅಭಿವೃದ್ದಿ ಕಾರ್ಯಗಳು ತಡವಾಗಿ ಆಗುತ್ತಿದ್ದು, ಇದರಿಂದ ಅಭಿವೃದ್ದಿ ಕುಂಟಿತವಾಗಿದೆ ಎಂದು ಹೇಳಿದರು.