ಕುಕನೂರು | ಕ್ವಾರಿಯಲ್ಲಿ ಬಿದ್ದು ಯುವಕ ಮೃತ್ಯು
ಕುಕನೂರು : ತಾಲೂಕಿನ ಗಾವರಾಳ ಸಮೀಪದ ಕಲ್ಲು ಕ್ವಾರಿಯಲ್ಲಿ ಕುರಿ ಮೈ ತೊಳೆಯಲು ಹೋಗಿ ಕುರಿಗಾಯಿ ಒಬ್ಬ ಮೃತಪಟ್ಟ ಘಟನೆ ನಡೆದಿದೆ.
ಮಡುಗಟ್ಟಿ ನಿಂತ ನೀರಿನಲ್ಲಿ 18 ವರ್ಷದ ಯುವಕನೊರ್ವ ಕುರಿಯ ಮೈ ತೊಳೆಯುವ ವೇಳೆ ಕಾಲು ಜಾರಿ ಮೃತ ಪಟ್ಟ ಘಟನೆ ವರದಿಯಾಗಿದೆ.
ಮೃತ ಯುವಕ ಗಾವರಾಳ ಗ್ರಾಮದ ಮಾರುತಿ ಎಂದು ಗುರುತಿಸಲಾಗಿದೆ. ಮಂಗಳವಾರದಂದು ಬೆಳಗ್ಗೆ ಸುಮಾರು 10 ಗಂಟೆಗೆ ಗ್ರಾನೆಟ್ ನಲ್ಲಿರುವ ಹೊಂಡದ ನೀರಿನಲ್ಲಿ ಮೈತೊಳೆಯುವ ವೇಳೆ ಕಾಲು ಜಾರಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕುಕನೂರು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಾಗೂ ಪೋಲಿಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಮೃತ ಯುವಕನ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಈ ವೇಳೆ ಕುಕನೂರು ಪೋಲಿಸ್ ಠಾಣೆ ಪಿಎಸ್ಐ ಟಿ.ಗುರುರಾಜ ಅಗ್ನಿಶಾಮಕ ಠಾಣೆಯ ಠಾಣಾ ಅಧಿಕಾರಿ ಕೆ.ಜನಾರ್ಧನ ಘಟನಾ ಸ್ಥಳದಲ್ಲಿ ಹಾಜರಿದ್ದರು.
ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್ಐ ಗುರುರಾಜ್ ತಿಳಿಸಿದ್ದಾರೆ.