ಕೊಪ್ಪಳ | ಪತಿಯಿಂದಲೇ ಪತ್ನಿಯ ಕೊಲೆ
ಕೊಪ್ಪಳ : ಪತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದ ಭಾಗ್ಯನಗರದಲ್ಲಿರುವ ಜನತಾ ಕಾಲೋನಿಯಲ್ಲಿ ಇಂದು ನಸುಕಿನ ಜಾವ ನಡೆದಿದೆ.
ರೇಣುಕಾ ಸಂಗಟಿ (25) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಭಾಗ್ಯನಗರದ ಅನಿಲ್ ಸಂಗಟಿ ಹಾಗೂ ಗದಗ ಜಿಲ್ಲೆ ತಿಮ್ಮಾಪುರದ ರೇಣುಕಾ ಜೊತೆ ಮದುವೆ ನಡೆದಿತ್ತು. ಮದುವೆಯಾದ ಆರು ತಿಂಗಳ ನಂತರ ಅನಿಲ್ ನಿತ್ಯ ಕುಡಿದು ಬಂದು ಜಗಳ ಮಾಡುವುದು, ನೀನು ಬೇರೆಯವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಿಯ ಎಂದು ಬೈಯುವುದು, ಹೊಡೆಯವುದು ಮಾಡುತಿದ್ದ ಎಂದು ಮೃತ ಮಹಿಳೆಯ ತಾಯಿ ಹನುಮವ್ವ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ರೇಣುಕಾಳ ಪತಿ ಅನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದರೆ, ಅನಿಲ್ ಮತ್ತು ಆತನ ಕುಟುಂಬದವರು ಕೊಲೆ ಮಾಡಿ, ಆತ್ಮಹತ್ಯೆಯ ಕಥೆ ಕಟ್ಟುತ್ತಿದ್ದಾರೆ ಎಂದು ಮೃತಳ ಹೆತ್ತವರು ಆರೋಪಿಸುತ್ತಿದ್ದಾರೆ.
ಈ ಕುರಿತು ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ರೇಣುಕಾಳ ಪತಿ ಅನಿಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.