ಕೊಪ್ಪಳ: ಧ್ವಜ ಸ್ತಂಭದ ಮೇಲಿಂದ ಬಿದ್ದು ವಿದ್ಯಾರ್ಥಿ ಮೃತ್ಯು

Update: 2024-08-16 06:45 GMT

ತಾವರಗೇರಾ:  ಧ್ವಜಸ್ತಂಭದ ಮೇಲಿಂದ ಬಿದ್ದು ಮೂರನೇ  ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಕಳಮಳ್ಳಿ ತಾಂಡಾದಲ್ಲಿ  ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಪ್ರಕಾಶ (9)  ಎಂದು ಗುರುತಿಸಲಾಗಿದೆ. ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಶಿಕ್ಷಕರು ಶಾಲೆಯ ಗೇಟ್ ಹಾಕಿ ತೆರಳಿದ್ದರು. ಬಳಿಕ ವಿದ್ಯಾರ್ಥಿಯು ಸ್ಥಳೀಯ ಬಾಲಕರೊಂದಿಗೆ ಕಾಂಪೌಂಡ್ ಹಾರಿ ಆಟವಾಡಲು ಶಾಲೆಯ ಮೈದಾನಕ್ಕೆ ತೆರಳಿದ್ದ ಎನ್ನಲಾಗಿದೆ.

ಧ್ವಜಸ್ತಂಭವನ್ನು ಏರಿದ್ದ  ಬಾಲಕ  ಕಂಬದ ಮೇಲೆ ಇದ್ದ ಕಟ್ಟಿಗೆಯನ್ನು ಹಿಡಿದು ಕೊಂಡಿದ್ದ. ಕಟ್ಟಿಗೆ ಮುರಿದು ಕೆಳಗೆ ಬಿದ್ದ ಬಾಲಕನನ್ನು  ಸ್ಥಳೀಯರು ತಾವರಗೇರಾ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದಿದ್ದಾರೆ. ಅಲ್ಲಿ ವೈದರು ಇಲ್ಲವೆಂದು ಕುಷ್ಟಗಿ ಆಸ್ಪತ್ರೆಗೆ  ತರಲಾಗಿತ್ತು. ಆದರೆ  ಪರಿಶೀಲಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಈ ಕುರಿತು ಇನ್ನೂ ಪ್ರಕರಣ  ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಮೃತ ವಿದ್ಯಾರ್ಥಿಯ ತಂದೆ ಸೋಮನಾಥ ತಾಯಿ ಸವಿತಾ ದಂಪತಿಗಳು ಹಾಸನಕ್ಕೆ ಕೂಲಿ ಅರಸಿಕೊಂಡು ಗುಳೆ ಹೋಗಿದ್ದಾರೆ. ಮೃತ ವಿದ್ಯಾರ್ಥಿಯು ಅಜ್ಜಿಯೊಂದಿಗೆ ತಾಂಡದಲ್ಲಿ ವಾಸವಾಗಿದ್ದು,  ಸೋಮನಾಥ -ಸವಿತಾ ದಂಪತಿಯ ಮೂರು ಮಕ್ಕಳಲ್ಲಿ ಎರಡನೇಯ ಮಗನಾಗಿದ್ದಾನೆ ಪ್ರಕಾಶ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News