ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ | ಇಂದು ಮತ್ತೆ ಸಭೆ ನಡೆಸಿದ ಸಚಿವ ಚಲುವರಾಯಸ್ವಾಮಿ

Update: 2024-12-16 17:29 GMT

ಮಂಡ್ಯ : ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಊಟದಲ್ಲಿ ಮಾಂಸಾಹಾರವನ್ನೂ ಸೇರ್ಪಡೆ ಮಾಡುವ ಕುರಿತಂತೆ ಸೋಮವಾರ ಪ್ರಗತಿಪರ ಸಂಘಟನೆಗಳ ಮುಖಂಡರ ಜತೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಭೆ ನಡೆಸಿದರು.

ಸಮ್ಮೇಳನದ ಊಟದ ಪಟ್ಟಿಯಲ್ಲಿ ಮಾಂಸಾಹಾರವನ್ನು ನಿಷೇಧಿಸಿರುವುದು ಏಕೆ? ಬಹುಜನರ ಆಹಾರವಾದ ಮಾಂಸಾಹಾರವನ್ನು ನಿಷೇಧಿಸಿರುವುದು ಕಾನೂನು ಉಲ್ಲಂಘನೆಯಾಗಿದೆ. ಸಮ್ಮೇಳನದಲ್ಲಿ ಸಸ್ಯಾಹಾರದ ಮತ್ತು ಮಾಂಸಾಹಾರ ಎರಡನ್ನೂ ಉಣಬಡಿಸುವ ಮೂಲಕ ಆಹಾರ ತಾರತಮ್ಯ ನಿವಾರಣೆ ಮಾಡಬೇಕು ಎಂದು ಹೋರಾಟಗಾರರು ವಿವರಿಸಿದರು.

ಸಭೆಯ ಅಭಿಪ್ರಾಯಗಳನ್ನು ಸಾವಧಾನವಾಗಿ ಕೇಳಿಸಿಕೊಂಡ ಸಚಿವ ಚಲುವರಾಯಸ್ವಾಮಿ, ಈ ಬಗ್ಗೆ ಇತರ ಸಚಿವರ ಜತೆ ಚರ್ಚೆ ಮಾಡುವ ಅಗತ್ಯ ಇದೆ. ಹಾಗಾಗಿ, ನಾಳೆ(ಮಂಗಳವಾರ) ಮತ್ತೆ ಸಭೆ ನಡೆಸಿ ತನ್ನ ತೀರ್ಮಾನ ಪ್ರಕಟಿಸುವುದಾಗಿ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News