ಮಂಡ್ಯ: ಪ್ರೇಯಸಿಯ ಮನೆ ಮುಂದೆ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ

Update: 2024-12-29 10:32 GMT

ಮಂಡ್ಯ: ಅಪ್ರಾಪ್ತ ವಯಸ್ಸಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನೋರ್ವ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದ ನಾಗಮಂಗಲದ ಕಾಳೇನಹಳ್ಳಿಯಲ್ಲಿ ನಡೆದಿದೆ.

ನಾಗಮಂಗಲದ ಬಸವೇಶ್ವರ ನಗರ ನಿವಾಸಿ ರಾಮಚಂದ್ರ(21) ಮೃತಪಟ್ಟ ಯುವಕ. ಈತ ಕಳೆದ ರಾತ್ರಿ ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಚಂದ್ರು ಕಾಳೇನಹಳ್ಳಿಯ ಅಪ್ರಾಪ್ತ ವಯಸ್ಸಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕಳೆದ ವರ್ಷ ಇವರಿಬ್ಬರು ಮನೆ ತೊರೆದು ಓಡಿ ಹೋಗಿದ್ದರು. ಆ ವೇಳೆ ರಾಮಚಂದ್ರ ವಿರುದ್ದ ಪೊಕ್ಸೋ ಕಾಯ್ದೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು.

ಬಳಿಕ 2 ಕುಟುಂಬಗಳ ರಾಜಿ ಸಂಧಾನ ಬಳಿಕ ಕೇಸ್ ಹಿಂಪಡೆದಿದ್ದರು. ಆ ಬಳಿಕ ಅಪ್ರಾಪ್ತ ವಯಸ್ಸಿನ ಪ್ರಿಯತಮೆ ರಾಮಚಂದ್ರರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದಿದ್ದ ರಾಮಚಂದ್ರು ಕಳೆದ ರಾತ್ರಿ ಯುವತಿಯ ಮನೆ ಬಳಿ ತೆರಳಿ ಬಂಡೆಗಳನ್ನು ಸಿಡಿಸುವ ಜಿಲೆಟಿನ್ ಅನ್ನು ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ರಾಮಚಂದ್ರರ ದೇಹ ಛಿದ್ರ-ಛಿದ್ರವಾಗಿದೆ.

ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರ ದಾಖಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News