ಮಂಡ್ಯ | ಪ್ರವಾಸಿಗರಿಂದ ಹಣ ವಸೂಲಿ ಆರೋಪ : ಮೂವರು ಪೊಲೀಸ್‌ ಸಿಬ್ಬಂದಿಗಳು ಅಮಾನತು

Update: 2025-01-02 16:51 GMT

ಅಮಾನತುಗೊಂಡ ಪೊಲೀಸ್‌ ಸಿಬ್ಬಂದಿಗಳು

ಮಂಡ್ಯ : ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆ‌ರ್.ಎಸ್. ಠಾಣೆಯ ಮೂವರು ಪೊಲೀಸ್‌ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಮಾನತುಗೊಳಿಸಿದ್ದಾರೆ.

ಪುರುಷೋತ್ತಮ್, ಅನಿಲ್ ಕುಮಾ‌ರ್ ಹಾಗೂ ಪ್ರಭಸ್ವಾಮಿ ಅಮಾನತುಗೊಂಡ ಪೊಲೀಸ್‌ ಸಿಬ್ಬಂದಿಗಳು . ಇವರು ಕೆ.ಅ‌ರ್.ಎಸ್. ಅಣೆಕಟ್ಟೆ ಸೇರಿದಂತೆ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಬರುವ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಪ್ರವಾಸಿಗರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಾರ್ವಜನಿಕರು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News