ಗೂಳಿಹಟ್ಟಿ ಶೇಖರ್ ಗೆ ಆರೆಸ್ಸೆಸ್ ಕಚೇರಿಗೆ ಪ್ರವೇಶ ನಿರಾಕರಣೆ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯಿಸಿದ್ದು ಹೀಗೆ...

Update: 2023-12-06 09:22 GMT

ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಆರೆಸ್ಸೆಸ್ ವಸ್ತುಸಂಗ್ರಹಾಲಯದ ಪ್ರವೇಶ ನಿರಾಕರಣೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಗೂಳಿಹಟ್ಟಿ ಶೇಖರ್ ಅವರು  ಬಹಳ ಸ್ಪಷ್ಟವಾದ ಪ್ರಶ್ನೆಯನ್ನು ಬಿಎಲ್ ಸಂತೋಷ ಅವರಿಗೆ ಕೇಳಿದ್ದಾರೆ. ನಾನು ಬಿಜೆಪಿಯ ಕಾರ್ಯಕರ್ತ, ನಾನು ಹಿಂದೂ.  ಆರ್ ಎಸ್ ಎಸ್ ಪ್ರಮುಖರ ಮನೆಗೆ ಭೇಟಿ ನೀಡಲು ಹೋದಾಗ, ನಾನು ಎಸ್ಸಿ ಎಂದು ತಿಳಿದು ನನಗೆ ಒಳಗಡೆ ಬಿಡಲಿಲ್ಲ. ಬಿಜೆಪಿಯಲ್ಲಿರುವ ಪ್ರಮುಖ ದಲಿತ ನಾಯಕರಿಗೂ ಪ್ರವೇಶ ಇಲ್ವಾ. ಸಾಮಾನ್ಯವಾಗಿ ಆರೆಸ್ಸೆಸ್ ನಲ್ಲಿ ದಲಿತರಿಗೆ ಅವಕಾಶ ಇದೆಯಾ. ಇದ್ದರೆ ಸರಸಂಘ ಚಾಲಕರನ್ನಾಗಿ ಮಾಡಲಿ. ಬಿಜೆಪಿಯಲ್ಲಿ ದಲಿತರಿಗೆ ,ಹಿಂದುಳಿದವರಿಗೆ ಗೌರವ ಇಲ್ವಾ, ಇದು ನನ್ನ ಪ್ರಶ್ನೆ ಅಲ್ಲ, ಅದು ಗೂಳಿಹಟ್ಟಿ ಪ್ರಶ್ನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್  ಅವರನ್ನು ಪ್ರಶ್ನಿಸಿದ್ದಾರೆ.

ಆತ್ಮೀಯ ಬಿಎಲ್ ಸಂತೋಷ್ ಜಿ, ಮಹಾಪರಿನಿರ್ವಾಣದಿವಸ್ ದಿನದಂದು, ಬಿಜೆಪಿಯ ಮಾಜಿ ಸಚಿವ  ಗೂಳಿಹಟ್ಟಿ ಶೇಖರ್ ಅವರು ಸರಳವಾದ ಸ್ಪಷ್ಟನೆಯನ್ನು ಕೇಳುತ್ತಿದ್ದಾರೆ, ಅವರು ದಲಿತ ಎಂಬ ಕಾರಣಕ್ಕಾಗಿ ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರ ಮನೆಗೆ (ಈಗ ವಸ್ತುಸಂಗ್ರಹಾಲಯ) ಪ್ರವೇಶವನ್ನು ಏಕೆ ನಿರಾಕರಿಸಲಾಯಿತು?

ಅಲ್ಲದೆ, ಕಳೆದ ವರ್ಷದ “ಚಡ್ಡಿ ಸಂಗ್ರಹ” ಅಭಿಯಾನವನ್ನು ಎಸ್ಸಿ ಮೋರ್ಚಾ ನಾಯಕರು ಮಾತ್ರ ಏಕೆ ಮಾಡಿದರು.  ಬಿಜೆಪಿ ಅಥವಾ ಆರೆಸ್ಸೆಸ್‌ ನ ಇತರ ಯಾವುದೇ ನಾಯಕರು ಏಕೆ ಮಾಡಲಿಲ್ಲ ಎಂದು ನೀವು ಸ್ಪಷ್ಟಪಡಿಸುತ್ತೀರಾ? ಆರೆಸ್ಸೆಸ್ ಚಡ್ಡಿಗಳನ್ನು ಸುಟ್ಟಾಗ ನೀವೇಕೆ ಮುಂದಾಳತ್ವ ವಹಿಸಲಿಲ್ಲ?

ಆರೆಸ್ಸೆಸ್‌‌ ಯಾವತ್ತೂ ಎಸ್ಸಿ/ಎಸ್ಟಿ ವಿರೋಧಿಯಾಗಿಯೇ ಇತ್ತು. ನಿಮ್ಮ ಯುದ್ಧಗಳನ್ನು ಹೋರಾಡಲು ನೀವು ದಲಿತರು ಮತ್ತು ಹಿಂದುಳಿದವರನ್ನು ಬಳಸಿ, ನೀವು ಹಿಂದೆ ಕುಳಿತು ಪ್ರದರ್ಶನವನ್ನು ಆನಂದಿಸುತ್ತಿರುತ್ತೀರಿ. ಇದು ನಿಜವಲ್ಲವೇ, ಜೀ? ಎಂದು ಕೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News