ಮೈಸೂರು| ಪೈಪ್ ಲೈನ್ ಒಳಗೆ ಸಿಲುಕಿದ್ದ ಎರಡು ಚಿರತೆಗಳ ರಕ್ಷಣೆ
Update: 2024-01-15 14:05 GMT
ಮೈಸೂರು: ಹಳೆ ಪೈಪ್ ಲೈನ್ ಒಳಗೆ ಸಿಲುಕಿದ್ದ ಎರಡು ಚಿರತೆಗಳನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮೈಸೂರು ತಾಲೂಕು ಇಲವಾಲ ಹೋಬಳಿ ರಾಮನಹಳ್ಳಿಯಲ್ಲಿ ಸೋಮವಾರ ಬೆಳಗಿನ ಜಾವ ಎರಡು ಚಿರತೆಗಳು ಸುಮಾರು 300 ಮೀಟರ್ ಉದ್ದದ ಹಳೆ ಪೈಪ್ ಲೈನ್ ಒಳಗೆ ಸೇರಿಕೊಂಡಿರುವುದಾಗಿ ಮಾಹಿತಿ ಬಂದ ಹಿನ್ನೆಲೆ, ಇಲಾಖೆ ಅಧಿಕಾರಿಗಳು, ಪಶುವೈದ್ಯಧಿಕಾರಿಗಳು, ಸಿಬಂದಿಗಳು ಹಾಗೂ ಎಲ್.ಟಿ.ಎಫ್ ತಂಡದೊಂದಿಗೆ ಕಾರ್ಯಚರಣೆ ನಡೆಸಿ ಎರಡು ಚಿರತೆಗಳನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆಯೂ ಇದೇ ಪೈಪ್ ಲೈನ್ ಒಳಗೆ ಚಿರತೆ ಮರಿಯೊಂದು ಸಿಲುಕಿಕೊಂಡಿತ್ತು. ಸುತ್ತಮುತ್ತಲಿನ ಗ್ರಾಮದ ಹಸು, ಕುರಿಗಳನ್ನು ಚಿರತೆಗಳು ತಿಂದು ಹಾಕಿದ್ದವು. ಇದರಿಂದ ಗ್ರಾಮಸ್ಥರು ಭಯಬೀತರಾಗಿದ್ದರು.