ಮೈಸೂರು | ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಹಲ್ಲೆಗೈದು ಕಾರನ್ನೇ ಕದ್ದೊಯ್ದ ದರೋಡೆಕೋರರು

Update: 2025-01-20 12:28 IST
ಮೈಸೂರು | ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಹಲ್ಲೆಗೈದು ಕಾರನ್ನೇ ಕದ್ದೊಯ್ದ ದರೋಡೆಕೋರರು

PC: screengrab/ x.com/prajavani

  • whatsapp icon

ಮೈಸೂರು: ಹಾಡಹಗಲೇ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಅವರಿಗೆ ಹಲ್ಲೆಗೈದ ದುಷ್ಕರ್ಮಿಗಳು ಕಾರನ್ನೇ ಕದ್ದೊಯ್ದ ಘಟನೆ ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ನಡೆದಿರುವುದು ವರದಿಯಾಗಿದೆ.

ಕೇರಳ ಮೂಲದ ಉದ್ಯಮಿ ಸೂಫಿ ಎಂಬವರ ಮೇಲೆ ಈ ದಾಳಿ ನಡೆದಿದೆ. ಮುಸುಕುಧಾರಿಗಳಾಗಿದ್ದ ದುಷ್ಕರ್ಮಿಗಳು ಕಾರನ್ನೇ ಕದ್ದೊಯ್ದಿದ್ದಾರೆ. ಇದರ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News