ಮೈಸೂರು: ವಿರೋಧದ ನಡುವೆಯೂ ಮಹಿಷ ದಸರಾಗೆ ವಿದ್ಯುಕ್ತ ಚಾಲನೆ

Update: 2024-09-29 06:38 GMT

ಮೈಸೂರು, ಸೆ. 29: ಸಣ್ಣ ವಿರೋಧದ ನಡುವೆಯೂ ಮಹಿಷ ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಗಿದೆ.

ಮೂಲ ನಿವಾಸಿಗಳ ರಾಜ ಎಂದೇ‌ ಕರೆಯಲ್ಪಡುವ ಮಹಿಷನನ್ನು ದ್ರಾವಿಡ ದೊರೆ ಎನ್ನುತ್ತಾರೆ.

ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಮಹಿಷನ ಕಂಚಿನ‌ ಸಣ್ಣ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಖ್ಯಾತ ಚಿಂತಕ ಯೋಗೇಶ್ ಮಾಸ್ಟರ್ ಉದ್ಘಾಟನೆ ಮಾಡಿದರು. ಇದೇ ವೇಳೆ ಬುದ್ದ, ಅಂಬೇಡ್ಕರ್ ಮೂರ್ತಿಗಳಿಗೂ ಪುಷ್ಪಾರ್ಚನೆ ಮಾಡಲಾಯಿತು.

ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಕಾರ್ಯಕ್ರಮ‌ ಏರ್ಪಡಿಸಲಾಗಿತ್ತಾದರೂ ನಗರ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಪುರಭವನದ ಆವರಣದಲ್ಲೇ ವೇದಿಕೆ ಕಾರ್ಯಕ್ರಮದಲ್ಲಿ ಮಹಿಷ ದಸರಾ ಆಚರಣೆ ಮಾಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಉರಿಲಿಳಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಬೋದಿ ದತ್ತ ಬಂತೇಜಿ, ಚಿಂತಕ ಶಿವಸುಂದರ್, ಪ್ರೊ‌ಕೆ.ಎಸ್.ಭಗವಾನ್, ಲೇಖಕ ಸಿದ್ಧಸ್ವಾಮಿ, ಪ್ರೊ.ಪಿ.ವಿ.ನಂಜರಾಜೇ ಅರಸ್, ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News