ಭಾರತದ ವೈವಿಧ್ಯತೆಯ ರಕ್ಷಣೆಗೆ ನ್ಯಾಯಾಲಯಗಳ ಪಾತ್ರ ಮಹತ್ತರ : ಡಿ.ವೈ.ಚಂದ್ರಚೂಡ್

Update: 2024-06-29 16:36 GMT

ಡಿ.ವೈ.ಚಂದ್ರಚೂಡ್ | PTI 

ಕೋಲ್ಕತಾ,ಜೂ.29: ಭಾರತೀಯ ನ್ಯಾಯಶಾಸ್ತ್ರದಲ್ಲಿ ಸಾಂವಿಧಾನಿಕ ನೈತಿಕತೆಯನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರತಿಪಾದಿಸಿದ್ದಾರೆ. ವೈವಿಧ್ಯತೆ, ಎಲ್ಲರನ್ನೂ ಒಳಗೊಳಿಸುವಿಕೆ ಹಾಗೂ ಸಹಿಷ್ಣುತೆಯನ್ನು ಖಾತರಿಪಡಿಸುವಲ್ಲಿ ನ್ಯಾಯಾಲಯಗಳ ಬದ್ಧತೆಯನ್ನು ಅವರು ಒತ್ತಿ ಹೇಳಿದ್ದಾರೆ.

ಕೋಲ್ಕತಾದಲ್ಲಿ ಶನಿವಾರ ರಾಷ್ಟ್ರೀಯ ನ್ಯಾಯಾಂಗ ಅಕಾಡಮಿಯ ಪೂರ್ವ ವಲಯದ ದ್ವಿತೀಯ ಪ್ರಾಂತೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು , ನ್ಯಾಯದಾನ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ಅಗತ್ಯವಿದೆಯೆಂದು ಅಭಿಪ್ರಾಯಿಸಿದ್ದಾರೆ.

ವೈವಿಧ್ಯತೆಯು ಭಾರತದ ಒಕ್ಕೂಟ ವ್ಯವಸ್ಥೆಯ ಹೆಗ್ಗುರುತಾಗಿದ್ದು ಎಂದು ಬಣ್ಣಿಸಿದ ಚಂದ್ರಚೂಡ್ ಭಾರತದ ವೈವಿಧ್ಯತೆಯನ್ನು ಸಂರಕ್ಷಿಸುವಲ್ಲಿ ನ್ಯಾಯಾಧೀಶರ ಪಾತ್ರ ಗುರುತರವಾಗಿದೆಯೆಂದು ಹೇಳಿದರು.‘‘

ಜನರು ನ್ಯಾಯಾಲಯಗಳನ್ನು ನ್ಯಾಯದ ದೇಗುಲವೆಂದು ಕರೆಯುವಾಗ ನನಗೆ ಹಿಂಜರಿಕೆಯಾಗುತ್ತದೆ. ಯಾಕೆಂದರೆ ನ್ಯಾಯಾಧೀಶರೇನೂ ದೇವರಲ್ಲ. ಬದಲಿಗೆ ಅವರು ಕರುಣೆ ಹಾಗೂ ಸಹಾನುಭೂತಿಯೊಂದಿಗೆ ನ್ಯಾಯದಾನ ಮಾಡುವ ಜನ ಸೇವಕರಾಗಿದ್ದಾರೆ ಎಂದರು. ‘ಕಾನೂನು ಹಾಗೂ ತಂತ್ರಜ್ಞಾನದ ಮೂಲಕ ನ್ಯಾಯದಾನವನ್ನು ಬಲಪಡಿಸುವ ಸಮಕಾಲೀನ ನ್ಯಾಯಾಂಗ ಬೆಳವಣಿಗೆಗಳು’ ಎಂಬ ಶೀರ್ಷಿಕೆಯ ಸಮಾವೇಶದಲ್ಲಿ ಮಾತನಾಡಿದ ಅವರು ನ್ಯಾಯಾಧೀಶರು ಸಂವಿಧಾನದ ಸೇವಕರೇ ಹೊರತು ಒಡೆಯರಲ್ಲ ಎಂದರು.

ಭಾರತದ ಸ್ವಾತಂತ್ರ್ಯದಿಂದೀಚೆಗೆ ಸುಪ್ರೀಂಕೋರ್ಟ್ ನೀಡಿರುವ 37 ಸಾವಿರಕ್ಕೂ ಅಧಿಕ ತೀರ್ಪುಗಳನ್ನು ಇಂಗ್ಲೀಷ್‌ನಿಂದ ಇತರ ಭಾಷೆಗಳಿಗೆ ಕೃತಕ ಬುದ್ಧಿಮತ್ತೆ (ಎಐ)ಯ ನೆರವಿನಿಂದ ಸಂವಿಧಾನವು ಮಾನ್ಯ ಮಾಡಿರುವ ಎಲ್ಲಾ ಭಾಷೆಗಳಿಗೆ ಅನುವಾದಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ನ್ಯಾಯಾಂಗವು ಪರಿಶುದ್ಧತೆ, ಪ್ರಾಮಾಣಿಕತೆ ಹಾಗೂ ಪಾವಿತ್ರ್ಯವನ್ನು ಹೊಂದಿದೆ. ನ್ಯಾಯಾಂಗವು ಜನರಿಂದ ಹಾಗೂ ಜನರಿಗಾಗಿ ಇರುವಂತಹದ್ದಾಗಿದೆ. ಒಂದು ವೇಳೆ ಜನರಿಗೆ ನ್ಯಾಯದಾನ ಮಾಡಲು ನ್ಯಾಯಾಂಗಕ್ಕೆ ಸಾಧ್ಯವಾಗದಿದ್ದರೆ ಮತ್ತ್ಯಾರಿಗೆ ಸಾಧ್ಯ?. ನ್ಯಾಯವನ್ನು ಪಡೆಯಲು ಹಾಗೂ ನಮ್ಮ ದೇಶದ ಪ್ರಜಾಪ್ರಭುತ್ವ ಹಾಗೂ ನಮ್ಮ ಸಂವಿಧಾನವನ್ನು ರಕ್ಷಿಸಲು ಇರುವ ಕಟ್ಟಕಡೆಯ ಆಸರೆ ಇದಾಗಿದೆ ಎಂದು ಚಂದ್ರಚೂಡ್ ಹೇಳಿದರು.

ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಲ್ಕತ್ತಾ ಹೈಕೋರ್ಟ್ ಹಾಗೂ ಪಶ್ಚಿಮ ಬಂಗಾಳ ನ್ಯಾಯಾಂಗ ಅಕಾಡಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News